ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಕರಿಗೆ ಮಕ್ಕಳನ್ನು ಚೆನ್ನಾಗಿ ಬೆಳೆಸುವುದೇ ಒಂದು ದೊಡ್ಡ ಚಾಲೆಂಜ್ - ಬಸವರಾಜ್ ಗಿರಿತಿಮ್ಮಣ್ಣವರ್

ಶಿರಹಟ್ಟಿ: ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಗೂಸ್ಕರ ಮಕ್ಕಳನ್ನು ಸರಿ ದಾರಿಯಲ್ಲಿ ಬೆಳೆಸುವುದು ಪಾಲಕರಿಗೆ ದೊಡ್ಡ ಚಾಲೆಂಜ್ ಆಗಿದೆ. ಮೊಬೈಲ್ , ಟೀ.ವಿ. ಹಾಗೂ ಇಂಟರ್ನೆಟ್ ಬಳಕೆಯಿಂದಾಗಿ ವಿದ್ಯಾರ್ಥಿಗಳ ಗಮನ ಅಭ್ಯಾಸದ ಕಡೆ ಕಡಿಮೆಯಾಗುತ್ತಿದೆ. ಅವರ ವರ್ತನೆಗಳು ಕೂಡಾ ವಿಚಿತ್ರವೆನಿಸುತ್ತಿವೆ, ಆದರೂ ಅವರು ನಮ್ಮ ಮಕ್ಕಳು. ಅವರನ್ನು ಸರಿ ದಾರಿಗೆ ತರುವ ಸಕಲ ಪ್ರಯತ್ನಗಳನ್ನು ನಾವು ಮಾಡಲೇ ಬೇಕಿದೆ ಎಂದು ಎಫ್ ಬಿ ಪೂಜಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣವರ್ ಹೇಳಿದರು.

ಅವರು ಪಟ್ಟಣದ ಎಫ್ ಬೀ ಪೂಜಾರ ಸರಕಾರಿ ಪದವಿ ಪೂರ್ವ ಕಾಲೇಜ್ ಶಿರಹಟ್ಟಿಯಲ್ಲಿ ಪಾಲಕರ ಸಭೆ ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಪಾಲಕರು ತಮ್ಮ ಮಕ್ಕಳ ಅಭಿವೃದ್ಧಿ ಕುರಿತು ಸಲಹೆಗಳನ್ನು ನೀಡಿದರು ಮತ್ತು ಕಾಲೇಜ್ ಹತ್ತಿರ ಬಸ್ ನಿಲ್ಲಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಲಿಂಗರಾಜ ಎತ್ನಳ್ಳಿ , ಎಸ್ ವೈ ಮುಜಾವರ, ರಾಜೇಶ್ವರಿ ಸಂಶಿ, ಕೋಟ್ರಯ್ಯ ಹೊಂಬಾಳಿಮಠ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

16/12/2024 02:44 pm

Cinque Terre

7.12 K

Cinque Terre

0