ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಕ್ರಮ ಗಾಂಜಾ ಮಾರಾಟಗಾರನ ಮನೆ ಮೇಲೆ ಅಬಕಾರಿ ಪೊಲೀಸರ ದಾಳಿ

ಗದಗ: ಅಕ್ರಮವಾಗಿ ಗಾಂಜಾವನ್ನು ಮನೆಯಲ್ಲೆ ಮಾರುತ್ತಿದ್ದ, ವ್ಯಕ್ತಿಯ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮಾಡಿ, ಗಾಂಜಾ ಸಮೇತ ಓರ್ವನನ್ನು ಪೋಲಿಸರು ಬಂಧಿಸಿದ್ದಾರೆ.

ಗದಗ ನಗರದ ವಕೀಲ ಚಾಳದ ನಿವಾಸಿ ಕನಕಪ್ಪ ಗುಡಿಮನಿ ಎಂಬ ಆರೋಪಿಯನ್ನು ಪೋಲಿಸರು ಬಂಧನ ಮಾಡಿದ್ದಾರೆ. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ 600 ಗ್ರಾಂ ಒಣ ಗಾಂಜಾವನ್ನ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಮಾರಾಟ ಮಾಡಲು ಮನೆಯಲ್ಲಿ ಗಾಂಜಾ ಸಂಗ್ರಹ ಮಾಡಿ ಮಾರುತ್ತಿದ್ದ.

ಇದರಿಂದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಡಿಸಿ ಭರತೇಶ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಎನ್. ಡಿ. ಪಿ. ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Abhishek Kamoji
Kshetra Samachara

Kshetra Samachara

29/09/2022 01:36 pm

Cinque Terre

22.2 K

Cinque Terre

0

ಸಂಬಂಧಿತ ಸುದ್ದಿ