ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹಾಡಹಗಲೇ ಮಹಿಳೆ ಕತ್ತು ಸೀಳಿ ಕೊಲೆ: ಭೀಕರ ದೃಶ್ಯ ಮೊಬೈಲ್ನಲ್ಲಿ ಸೆರೆ

ಗದಗ: ಗದಗನಲ್ಲಿ ನಿನ್ನೆ ನಡೆದಿದ್ದ ಮಹಿಳೆಯೊಬ್ಬರ ಭೀಕರ ಹತ್ಯೆಯ ವೀಡಿಯೋವನ್ನ ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ನೋಡುಗರನ್ನ ಬೆಚ್ಚಿ ಬೀಳಿಸುತ್ತೆ.

ನಿನ್ನೆ ಗದಗ ನಗರದ ಮುಳಗುಂದ ನಾಕಾ ಸಮೀಪದ ಎಸ್.ಬಿ ಬೇಕರಿ ಎದುರಿನಲ್ಲಿ ಶೋಭಾ ಲಮಾಣಿ ಅಲಿಯಾಸ್ ಮೀನಾಜ್ ಬೇಪಾರಿ ಅನ್ನೋ‌ 28 ವರ್ಷದ ಮಹಿಳೆಯ ಹತ್ಯೆಯಾಗಿದೆ. ಕೋರ್ಟ್ನಿಂದ ತನ್ನ ಕೆಲಸ ಮುಗಿಸಿಕೊಂಡು ಆಟೋ ಮೂಲಕ ಬಂದ ಮಹಿಳೆಯನ್ನ ನಾಲ್ವರು ಹಂತಕರು ಕೊಚ್ಚಿ ಕೊಲೆಗೈದಿರುತ್ತಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಹಿಳೆ ಕತ್ತನ್ನ ಮನಬಂದಂತೆ ಕೊಯ್ದು ಹತ್ಯೆಗೈದಿದ್ದಾರೆ.‌ ಹೀಗೆ ಹತ್ಯೆಗೈಯ್ಯುವ ದೃಶ್ಯವನ್ನ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು,ಮಹಿಳೆ ಕತ್ತು‌ ಕುಯ್ಯೋ ವಿಡಿಯೋ ಗದಗ ಬೆಟಗೇರಿ ಅವಳಿ ನಗರದ‌ ಜನ್ರನ್ನ ಬೆಚ್ಚಿಬೀಳಿಸಿದೆ.

ಸದ್ಯ ಈ ವೀಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ. ಹಾಡಹಗಲೇ ಮಹಿಳೆ ಕತ್ತು ಕೊಯ್ದಿದ್ದ ನಾಲ್ವರು ಹಂತಕರನ್ನ ಪೊಲೀಸರು ಈಗಾಗಲೇ‌ ಬಂಧಿಸಿದ್ದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

05/10/2022 08:33 am

Cinque Terre

44.16 K

Cinque Terre

1

ಸಂಬಂಧಿತ ಸುದ್ದಿ