ಗದಗ: ಕೆರೆ ಅಭಿವೃದ್ಧಿ ಕಾಮಗಾರಿಗೆ 60% ಮೆಟೀರಿಯಲ್ಸ್ ಸಪ್ಲಾಯ್ ಮಾಡಿದ ಬಗ್ಗೆ ಎಮ್ ಬಿ ಬುಕ್ ಬರೆಯಲು ಲಂಚ ಕೇಳಿದ ಆರೋಪದಲ್ಲಿ ಸಹಾಯಕ ಇಂಜಿನಿಯರ್ ಲೋಕಾಯುಕ್ತರ ಬಲೆಗೆ ಬಿದ್ದಿರೋ ಘಟನೆ ಜರುಗಿದೆ. ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಗಳಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿತ್ತು. ಅದಕ್ಕೆ 60% ನಷ್ಟು ಮೆಟೀರಿಯಲ್ಸ್ ಮಂಜುನಾಥ್ ಬುರಡಿ ಸಪ್ಲಾಯ್ ಮಾಡಿದ್ದರು.
ಗ್ರಾಮದ ಯಲ್ಲಪ್ಪ ಹಿರೇಮನಿ ಅನ್ನೋರು ಕೆಲಸ ಮಾಡಿದ್ದು ,ಎಮ್ ಬಿ ಬರೆಯಲು ತಾಲೂಕು ಪಂಚಾಯತಿ ತಾಂತ್ರಿಕ ಸಹಾಯಕ ಇಂಜಿನಿಯರ್ ಬಸವರಾಜ್ ಪಟ್ಟಣ್ಣವರ್ 20 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ಅದರಲ್ಲಿ 10 ಸಾವಿರ ಹಣ ಕೊಡಲಾಗಿತ್ತು. ಬುಧವಾರ ಮತ್ತೆ ಹಣ ಕೊಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಕೊತಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಗಳಿ ಗ್ರಾಮದ ಕೆರೆ ಅಭಿವೃದ್ಧಿ ಅಡಿ ಹತ್ತು ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಗ್ರಾಮದ ಯಲ್ಲಪ್ಪ ಹಿರೇಮನಿ ಕೆರೆ ಅಭಿವೃದ್ಧಿ ಅಡಿಯಲ್ಲಿ, ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದ್ದು,ಕಾಮಗಾರಿ ಬಿಲ್ಲನ್ನು ಮಂಜೂರು ಮಾಡಲು ಕೇಳಿದಾಗ 20 ಸಾವಿರ ಹಣ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇಂದು ರೋಣ ಪಟ್ಟಣದ ಸೂಡಿ ಕ್ರಾಸ್ ನ ಖಾಸಗಿ ಹೊಟೇಲ್‌ನಲ್ಲಿ 10ಸಾವಿರ ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
Kshetra Samachara
12/10/2022 08:09 pm