ಮಕ್ಕಳನ್ನ ಕಿಡ್ಯಾಪ್ ಮಾಡಿ ಹತ್ಯೆ ಮಾಡುವ ಗುಂಪೊಂದು ಬಂದಿದೆ. ವಿದೇಶದಿಂದ ಬಂದಿರೋ ಈ ಗುಂಪು ಮಕ್ಕಳನ್ನ ಟಾರ್ಗೆಟ್ ಮಾಡಿ ಆಪರೇಟ್ ಮಾಡ್ತಿದೆ ಎನ್ನುವ ವೀಡಿಯೋಗಳು ಹರಿದಾಡ್ತಿದ್ದು, ಇಂಥ ವಿಡಿಯೋಗಳನ್ನ ಸರ್ಕ್ಯುಲೆಟ್ ಮಾಡಬಾರದು ಎಂದು ಗದಗ ಎಸ್ ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಈ ಬಗ್ಗೆ ವೀಡಿಯೋ ಮಾಹಿತಿ ನೀಡಿದ ಅವ್ರು, ಇತ್ತೀಚೆಗೆ ಮಕ್ಕಳ ಕಳ್ಳರ ವೀಡಿಯೋ ಅಂತಾ ಬಿಂಬಿಸುವ ವಿಡಿಯೋಗಳನ್ನ ಹರಿಬಿಡಲಾಗ್ತಿದೆ.ಇದ್ರಿಂದಾಗಿ ಜನ ಅನುಮಾನ ಬಂದವರನ್ನು ಹಿಡಿದು ಥಳಿಸುವ ಪ್ರಕರಣ ಬೆಳಕಿಗೆ ಬಂದಿವೆ.
ಆದ್ರೆ ಗದಗ ಜಿಲ್ಲೆಯಲ್ಲಿ ಮಕ್ಕಳ ಕಳ್ಳತನದ ಪ್ರಕರಣಗಳು ದಾಖಲಾಗಿಲ್ಲ. ಸಂದೇಹ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿನ್ನೆ ಮಕ್ಕಳ ಕಳ್ಳ ಅಂತ ಓರ್ವ ವ್ಯಕ್ತಿಯನ್ನ ಸ್ಥಳೀಯರು ಹಿಡಿದಿದ್ರು. ಆದ್ರೆ, ಕಲ್ಕತ್ತಾ ಮೂಲದ ವ್ಯಕ್ತಿ ಸಿಕ್ಕಿದ್ದ. ಆತ ಮಕ್ಕಳಿಗೆ ಚಾಕೊಲೇಟ್ ಕೊಡಿಸಿದ್ದ ಎನ್ನುವ ಕಾರಣಕ್ಕೆ ಸ್ಥಳೀಯರು ಆತನನ್ನ ಹಿಡಿದು ಥಳಿಸಿದ್ದರು. ವಿಚಾರಣೆ ನಡೆಸಿದಾಗ ಆತ ಮಕ್ಕಳ ಕಳ್ಳ ಅಲ್ಲ ಎನ್ನುವ ಗೊತ್ತಾಗಿದೆ. ಪಿಕ್ ಪ್ಯಾಕೆಟ್ ಮಾಡುವವನು ಎಂಬ ಅನುಮಾನ ಇದೆ. ಹೀಗಾಗಿ ಆತನನ್ನ ವಶಕ್ಕೆ ಪಡೆದು ತನಿಖೆ ನಡೆಸಲಾಗ್ತಿದೆ.
ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹಲ್ಲೆ ಮಾಡುವ ಅಥವಾ ಥಳಿಸುವುದರ ಬದಲು ಪೊಲೀಸರಿಗೆ ಮಾಹಿತಿ ನೀಡಿ ಎಂದು ಎಸ್ ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
PublicNext
14/09/2022 05:58 pm