ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಣ್ಣನ ಕೊಲೆ ಮಾಡಿದ್ದಕ್ಕೆ ತಮ್ಮನ ಸೇಡು: ಬೇಕರಿ ಬಳಿ ಮೀನಾಜ್ ಮರ್ಡರ್

ಗದಗ: ನಗರದ ಮುಳಗುಂದ ನಾಕಾ ಬಳಿಯ ಎಸ್.ಬಿ ಬೇಕರಿ ಎದುರು ಮಹಿಳೆಯ ಕೊಲೆ ನಡೆದಿದ್ದು, ಗದಗ ಬೆಟಗೇರಿ ಜನರು ಬೆಚ್ಚಿಬೀಳುವಂತಾಗಿದೆ.

ನಗರದ ಗಂಗಿಮಡಿ ಬಡಾವಣೆ ನಿವಾಸಿಯಾಗಿದ್ದ ಶೋಭಾ ಲಮಾಣಿ ಅಲಿಯಾಸ್ ಮಿನಾಜ್ ಬೇಪಾರಿ ಕೊಲೆಯಾದ ಮಹಿಳೆ. ಹಳೇ ದ್ವೇಷದ ಹಿನ್ನೆಲೆ ಚೇತನ್ ಕುಮಾರ್ ಲೋಕಣ್ಣವರ್ ಹಾಗೂ ರೋಹನ್ ಕುಮಾರ್ ಲೋಕಣ್ಣವರ್ ಹತ್ಯೆ ಮಾಡಿದ್ದಾರೆ ಅಂತ ಎಸ್.ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಕೋರ್ಟ್ ಕಲಾಪ ಮುಗಿಸಿಕೊಂಡು ಆಟೋ ಏರಿ ಮಧ್ಯಾಹ್ನ 3:30ರ ಸುಮಾರು ನಗರದ ಎಸ್.ಬಿ ಬೇಕರಿ ಬಳಿ ಬಂದಾಕೆಯ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಶೋಭಾ ಮಗುವಿಗಾಗಿ ಬೇಕರಿ ತಿನಿಸು ಖರೀದಿಸಲು ಬೇಕರಿಗೆ ಬಂದಿದ್ದಳು. ಅಲ್ಲೇ ಕಾಯ್ದು ಕುಳಿತ್ತಿದ್ದ ಇಬ್ವರು ಚಾಕುವಿನಿಂದ ಕತ್ತು ಸೀಳಿಸಿದ್ದಾರೆ. ಪ್ರತಿರೋಧವೊಡ್ಡಿದಾಗ ಕೈಗೆ ಚೂರಿ ಏಟು ಬಿದ್ದ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಗದಗ ನಗರದ ಗಂಗಿಮಡಿಯಲ್ಲಿ 2020ರಲ್ಲಿ ರಮೇಶ್ ಕುಮಾರ್ ಲೋಕಣ್ಣವರ್ ಎಂಬಾತನ ಕೊಲೆ ನಡೆದಿದ್ದು, ಕೊಲೆ ಕೇಸ್ ವಿಚಾರವಾಗಿ ಶೋಭಾ ಅಲಿಯಾಸ್ ಮಿನಾಜ್ ಹಾಗೂ ಗಂಡ ವಾಸೀಂ ಬೇಪಾರಿ ಈ ಕೊಲೆಯಲ್ಲಿ ಭಾಗಿಯಾಗಿದ್ರು. ಕಳೆದ ಕೆಲ ದಿನಗಳ ಹಿಂದೆ ಬೇಲ್ ಮೇಲೆ ಇಬ್ಬರು ಆಚೆ ಬಂದಿದ್ರು. ಬೇಲ್ ಆದನಂತ್ರ ಇಬ್ಬರು ಹುಬ್ಬಳ್ಳಿಯಲ್ಲಿ ವಾಸವಿದ್ರು. ಕೋರ್ಟ್ ಕಲಾಪ ಇದ್ದಾಗ ಗದಗ ನಗರಕ್ಕೆ ಭೇಟಿ ಕೊಡ್ತಿದ್ರು. ಇಂದು ಕೇಸ್ ವಿಚಾರಕ್ಕೆ ಹುಬ್ಬಳ್ಳಿಯಿಂದ ಗದಗ ನಗರಕ್ಕೆ ಶೋಭಾ ಬಂದಿದ್ರು ಎನ್ನಲಾಗಿದೆ‌. ಇದೇ ವೇಳೆಗೆ ಕಾಯುತ್ತಿದ್ದ ಚೇತನ್ ಕುಮಾರ್, ರೋಹನ್ ಕುಮಾರ್ ಹತ್ಯೆ ಮಾಡಿದ್ದಾರೆ. 2020 ರಮೇಶ್ ಕೊಲೆ ಹಿನ್ನೆಲೆ ಜೊತೆಗೆ ಕೇಸ್‌ಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.‌

Edited By : Somashekar
PublicNext

PublicNext

04/10/2022 01:59 pm

Cinque Terre

23.4 K

Cinque Terre

1

ಸಂಬಂಧಿತ ಸುದ್ದಿ