ಟಿವಿಯಲ್ಲಿ ಪ್ರಸಾರವಾಗುವ ಈ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್ ಬಿಡಿ. ‘ಬಂಟಿ ನಿನ್ನ ಸಾಬೂನು ಸ್ಲೋ ನಾ’ ಈ ಡೈಲಾಗ್ ಬಹುತೇಕ ಎಲ್ಲರಿಗೂ ನೆನಪಿದ್ದೇ ಇರುತ್ತದೆ. ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ಮುದ್ದು ಮುಖದ ಬಾಲೆಯೊಬ್ಬಳು ಹೇಳುವ ಸಂಭಾಷಣೆ ಇದು. ಸಾಮಾನ್ಯವಾಗಿ ಈ ಜಾಹೀರಾತು ಎಲ್ಲರಿಗೂ ನೆನಪಿರುತ್ತೆ. ಅದೂ ಈ ಕೊರೋನಾ ಟೈಮಲ್ಲಿ ಸಿಕ್ಕಾಪಟ್ಟೆ ರಿಲೇಟ್ ಆಗೋ ಆ್ಯಡ್ ಇದು. ಕೈ ತೊಳೀಬೇಕು, ಅದೂ ತಿಕ್ಕಿ ತಿಕ್ಕಿ 20 ಸೆಕೆಂಡ್‌ಗಳ ಕಾಲ ಎನ್ನುವಾಗ ಬಂಟಿ, ಸಾಬೂನೂ ಸ್ಲೋ ಆ್ಯಡ್ ಮನಸ್ಸಿನಲ್ಲಿ ಹಾದು ಹೋಗುತ್ತೆ. ‘ಕೈ ತೊಳೀತಾ ಇರು, ತೊಳೀತಾ ಇರು’ ಎಂದು ಹೇಳಿದ ಪುಟ್ಟ ಬಾಲಕನಿಗೆ ಟಾಂಗ್ ಕೊಟ್ಟ ಸುಂದರ ಚೆಲುವೆ ಈಕೆ. ಅವರೆ ಸಾಬೂನು ಹುಡುಗಿ ಅವನೀತ್ ಕೌರ್.
2013ರಲ್ಲಿ ಚಿತ್ರೀಕರಿಸಿದ ಲೈಫ್ ಬಾಯ್ ಸಾಬೂನಿನ ಜಾಹೀರಾತಿನಲ್ಲಿ ಕಾಣಿಸಿಕೊಂಡ ಪುಟ್ಟ ಹುಡುಗಿ. ಬಂಟಿ ಕೈ ತೊಳೆಯುವ ಲೈಫ್ ಬಾಯ್ ನ ಈ ಜಾಹೀರಾತಂತೂ ಕೊರೊನಾ ಕಾಲದಲ್ಲಿ ಹೆಚ್ಚಾಗಿಯೇ ಹರಿದಾಡಿತು. ಮೀಮ್ ಆಗಿಯೂ ಸಾಮಾಜಿಕ ಜಾಲತಾಣದಲ್ಲಿ ನಗೆ ಉಕ್ಕಿಸಿತು. ಆ ಜಾಹಿರಾತಿನಲ್ಲಿ ಬಂಟಿಯನ್ನು ಅವನ ಸಾಬೂನಿನ ಕಾರಣಕ್ಕೆ ತಮಾಷೆ ಮಾಡುವ ಆ ಮುದ್ದು ಮುಖದ ಹುಡುಗಿ ನೆನಪಿದೆಯಲ್ಲವೆ? ಆಕೆ ಈಗ ಹೇಗಿದ್ದಾಳೆ ಗೊತ್ತಾ? ಏಳು ವರ್ಷದಲ್ಲಿ ಆ ಮುದ್ದು ಮುಖದ ಹುಡುಗಿ ಪೂರ್ಣ ಬದಲಾಗಿ ಹೋಗಿದ್ದಾಳೆ. 2002 ರಲ್ಲಿ ಜಲಂಧರ್ ನಲ್ಲಿ ಹುಟ್ಟಿದ ಅವನೀತ್ ಕೌರ್. ಎಳವೆಯಲ್ಲೇ ಡಾನ್ಸ್ ಇಂಡಿಯಾ ಡಾನ್ಸ್ ಲಿಟಲ್ ಮಾಸ್ಟರ್ಸ್ ನಲ್ಲಿ ಭಾಗವಹಿಸಿದ್ದ ಅವರು, 50 ಕ್ಕೂ ಹೆಚ್ಚು ಟಿವಿ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.
PublicNext
02/01/2021 11:44 am