ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಕೊರೊನಾ ಪಾಸಿಟಿವ್ ಆಗಿದೆ. ಸದ್ಯ ಸುದೀಪ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆಲ್ಲ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ನಿಜವಾಗಲೂ ಆಗಿದ್ದೇನೂ ಅನ್ನೋದನ್ನ ಸುದೀಪ್ ಮ್ಯಾನೇಜರ್ ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಕೊರೊನಾ ಆಗಿಲ್ಲ.ಇದು ಜೆಸ್ಟ್ ವೈರಲ್ ಫೀವರ್. ವಿಕ್ರಾಂತ್ ರೋಣ ಚಿತ್ರದ ಪ್ರಚಾರ ಕಾರ್ಯದಲ್ಲಿಯೇ ಸುದೀಪ್ ಅವ್ರು ಇದ್ದಾರೆ. ಹಾಗಾಗಿಯೇ ಅವರಿಗೆ ವೈರಲ್ ಫೀವರ್ ಆಗಿದೆ ಎಂದು ಜಾಕ್ ಮಂಜು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಅವರು ಇಂದು ಮತ್ತು ನಾಳೆ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಎಂದಿನಂತೆ ಸಿನಿಮಾ ಪ್ರಚಾರದಲ್ಲಿಯೇ ತೊಡಗಲಿದ್ದಾರೆ. ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬೇಡಿ ಅಂತಲೇ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ.
PublicNext
20/07/2022 07:59 pm