ಕಾಗವಾಡ : ಸತತ ಎರಡು ವರ್ಷದಿಂದ ಕೋವಿಡ್ ಮಹಾಮಾರಿ ಹಬ್ಬಗಳಿಗೆ ಕಡಿವಾಣ ಹಾಕಿ ಸಂಬಂಧಗಳ ಸುಳಿವೇ ಇಲ್ಲದಂತೆ ಮಾಡಿತ್ತು. ಆದರೆ ಈ ವರ್ಷ ವರ್ಷರಂಭದಿಂದ ಎಲ್ಲೆಡೆ ಜಾತ್ರೆ ಮಹೋತ್ಸವ, ಹಬ್ಬದ ಹರಿದಿನಗಳು ಅತ್ಯಂತ ವಿಜೃಂಭಣೆಯಿಂದ ಜರುಗಿ ಸಾಂಸ್ಕೃತಿಕ ಲೋಕದ ಕಳೆಗಟ್ಟುತ್ತಿದೆ.
ಅಣ್ಣ-ತಂಗಿಯರ ಭಾಂದವ್ಯದ ಸಂಕೇತ ಎಂದು ಆಚರಿಸಲಾಗುತ್ತಿರುವ ಈ ವೇಳೆಯಲ್ಲಿ ಅಚ್ಚರಿ ಎಂಬಂತೆ ಒಂದೇ ಕುಟುಂಬದ ನಾಲ್ಕು ತಲೆಮಾರಿನವರು ಏಕಕಾಲಕ್ಕೆ ರಾಖಿ ಕಟ್ಟಿಸಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಕಾಗವಾಡ ಮತಕ್ಷೇತ್ರದ ಸಂಬರಗಿ ಗ್ರಾಮದ ಅಪ್ಪಣ್ಣ ಕೋಳಿ ಅವರ ಮನೆಯಲ್ಲಿ ಅಜ್ಜ, ಮಗ, ಮೊಮ್ಮಗ, ಮರಿ ಮೊಮ್ಮಗ ಸೇರಿದಂತೆ ಎಲ್ಲರೂ ಒಟ್ಟಿಗೆ ಒಂದೇ ಲೈನ್‌ನಲ್ಲಿ ಕುಳಿತು ರಾಖಿ ಕಟ್ಟಿಸಿಕೊಂಡು ಹಬ್ಬ ಆಚರಿಸಿದ್ದಾರೆ.
PublicNext
12/08/2022 05:34 pm