ಮುಂಬೈ: ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ನಿಂದ ಸಂಪೂರ್ಣ ಹೊರ ಬಂದಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಸಿಕ್ಕಿದೆ.ಆದರೂ ಎಲ್ಲೂ ಆರ್ಯನ್ ಖಾನ್ ಯಾವುದರ ಬಗ್ಗೇನೂ ಮಾತನಾಡಿಯೇ ಇಲ್ಲ. ಆದರೆ, ಈಗ ಆರ್ಯನ್ ಹೇಳಿದ್ದ ಒಂದಷ್ಟು ಸತ್ಯವನ್ನ ಎನ್‌ಸಿಬಿ ಅಧಿಕಾರಿಯೊಬ್ಬರು ಈಗ ಬಹಿರಂಗ ಪಡಿಸಿದ್ದಾರೆ.
ಎನ್‌ಸಿಬಿ ಡೆಪ್ಯುಟಿ ಡೈರೆಕ್ಟರ್ ಸಂಜಯ್ ಸಿಂಗ್ ಸಂದರ್ಶನವೊಂದರಲ್ಲಿ ಆರ್ಯನ್ ಹೇಳಿರೋ ಒಂದಷ್ಟು ಸತ್ಯ ಬಿಚ್ಚಿಟ್ಟಿದ್ದಾರೆ. "ಏಜನ್ಸಿ ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಡೀಲರ್ ರೀತಿಯೇ ನೋಡುತ್ತಿದೆ. ಡ್ರಗ್ ಡೀಲಿಂಗ್‌ಗೆ ನಾನು ಹಣ ಒದಗಿಸಿದ್ದೇ ಎಂದು ಹೇಳ್ತಿದ್ದೀರಾ. ಇದಕ್ಕೆ ನಾನು ಅರ್ಹನೆ" ಎಂದು ಆರ್ಯನ್ ಅಂತು ಕೇಳಿದ್ದನು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
"ನನ್ನನ್ನು ಬಂಧಿಸಿದ ಆ ದಿನ ನನ್ನ ಬಳಿ ಯಾವುದೇ ಡ್ರಗ್ಸ್ ಇರಲೇ ಇಲ್ಲ. ಆದರೆ, ಸರ್ ನೀವೂ ದೊಡ್ಡ ತಪ್ಪು ಮಾಡಿದ್ದೀರಾ. ನನ್ನ ಖ್ಯಾತಿಯನ್ನ ಹಾಳು ಮಾಡಿದ್ದೀರಾ. ನಾನು ಇಷ್ಟುವಾರ ಯಾಕೆ ಜೈಲಿನಲ್ಲಿ ಕಳಿಯಬೇಕು. ಇದಕ್ಕೆ ನಾನು ಅರ್ಹನೆ" ಎಂದು ಆರ್ಯನ್ ಖಾನ್ ನನ್ನ ಪ್ರಶ್ನೆ ಮಾಡಿದ್ದನು ಎಂದು ಸಂಜಯ್ ಸಿಂಗ್ ಈಗ ಹೇಳಿದ್ದಾರೆ.
PublicNext
11/06/2022 04:05 pm