ವೀಡಿಯೋ ಕೃಪೆ-VOOT
ಬಿಗ್ ಬಾಸ್ ಓಟಿಟಿಯಲ್ಲಿ ಜಗಳ ಶುರು ಆಗಿ ಬಿಟ್ಟಿವೆ. ಹೌದು. ಬಿಗ್ ಬಾಸ್ ಮನೆಯಲ್ಲಿ ಏನೇನೋ ಆಗುತ್ತದೆ. ಅದರಂತೆ ಇಲ್ಲಿ ಈಗಲೇ ಫೈಟಿಂಗ್ ಶುರು ಆಗಿ ಬಿಟ್ಟಿದೆ. ಜಗಳ ಮಾಡಿದೋರು ಬೇರೆ ಯಾರೋ ಅಲ್ಲ.ನಟ ರಾಕೇಶ್ ಅಡಿಗ ಮತ್ತು ರೂಪೇಶ್ ಇಲ್ಲಿ ಬೇಜಾನ್ ಜಗಳ ಮಾಡಿದ್ದಾರೆ.
ರಾಕೇಶ್ ಮತ್ತು ರೂಪೇಶ್ ಜಗಳ ಕಂಡು ಬಿಗ್ ಬಾಸ್ ಮನೆಯ ಇತರ ಸದಸ್ಯರು ಒಂದ್ ಅರೆಕ್ಷಣ ಶಾಕ್ ಆಗಿದ್ದರು. ಇಬ್ಬರ ನಡುವಿನ ಭಾರೀ ಜಗಳವನ್ನ ಬಿಡಿಸೋಕೂ ಸುತ್ತುವರೆದರು.
ಬಿಗ್ ಬಾಸ್ ಮನೆಯ ಈ ಜಗಳ ನಿಜಕ್ಕೂ ಬಲು ಜೋರಾಗಿಯೇ ಇತ್ತು. ಆದರೆ, ಆ ಬಳಿಕ ಅಲ್ಲಿ ನಗುವಿನ ಅಲೆಯ ಹರಿದು ಬಿಡ್ತು. ಯಾಕೆಂದ್ರೆ, ರೂಪೇಶ್ ಮತ್ತು ರಾಕೇಶ್ ಇಬ್ಬರು ಜಗಳವಾಡೋ ನಾಟಕ ಮಾಡಿದ್ದರು. ಹೀಗೆ ಅಲ್ಲಿದ್ದೋರಿಗೆ ಚಮಕ್ ಕೊಟ್ಟೇ ಬಿಟ್ಟರು.
PublicNext
09/08/2022 02:01 pm