ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಹೈಪ್ ಸಿಕ್ಕಾಪಟ್ಟೆ ಕ್ರಿಯೇಟ್ ಆಗಿದೆ. ಚಿತ್ರ ಪ್ರೇಮಿಗಳಲ್ಲಿ ಒಂದು ಸಹಜ ಕುತೂಹಲ ಕೂಡ ಇದೆ. ಮೊನ್ನೆಯಿಂದಲೇ ಅಡ್ವಾನ್ಸ್ ಬುಕಿಂಗ್ ಕೂಡ ಶುರು ಆಗಿದೆ. ಆದರೆ, ಅದ್ಯಾಕೋ ಸಿನಿಪ್ರೇಮಿಗಳು ಟಿಕೆಟ್ ಬುಕಿಂಗ್ ನಲ್ಲಿ ಅಷ್ಟೇನೂ ಆಸಕ್ತಿ ತೋರಿದಂತೆ ಕಾಣ್ತಿಲ್ಲ.
ಹೌದು. ವಿಕ್ರಾಂತ್ ರೋಣ ಚಿತ್ರದ ಬುಕಿಂಗ್ ಶುರು ಆಗಿ ಬಿಟ್ಟಿದೆ. ಚಿತ್ರ 2ಡಿ ಮತ್ತು 3ಡಿಯಲ್ಲೂ ಬರ್ತಾಯಿದೆ. ಅದ್ಯಾಗ್ಯೂ ಬಹು ಭಾಷೆ ಬೇರೆ. ಆದರೆ, ಸದ್ಯಕ್ಕೆ ಕನ್ನಡದಲ್ಲಿ ಅದರಲ್ಲೂ ಬೆಂಗಳೂರಲ್ಲಿ ವಿಕ್ರಾಂತ್ ರೋಣ ಚಿತ್ರ ಬುಕಿಂಗ್ ಓಪನ್ ಆಗಿವೆ. ಇದರಲ್ಲಿ 2ಡಿ ಗಿಂತಲೂ 3ಡಿಗೆ ಹೆಚ್ಚು ಜನ ಅಡ್ವಾನ್ಸ್ ಬುಕಿಂಗ್ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇದೆ.
ವಿಕ್ರಾಂತ್ ರೋಣ ಚಿತ್ರದ ಬುಕಿಂಗ್ ಮೊನ್ನೆ ಜುಲೈ-24 ರಂದು ಶುರು ಆಗಿದೆ. ಅಂದಿನಿಂದ ಇಂದಿನವರೆಗೂ ಬುಕಿಂಗ್ ಅಂತಹ ಖಾಸ್ ಏನೂ ಇಲ್ಲ. ಕೊಂಚ ಡಲ್ ಆಗಿಯೇ ಇದೆ. ಇನ್ನು ಮಂಗಳವಾರ ಬುಕಿಂಗ್ ಹೆಚ್ಚಾದರೂ ಆಗಬಹುದು. ಯಾಕಂದ್ರೆ ಚಿತ್ರ ಜುಲೈ-28ಕ್ಕೆ ರಿಲೀಸ್ ಆಗುತ್ತಿದೆ. ಅಲ್ಲಿವರೆಗೂ ಇದು ಹೆಚ್ಚಾದರೂ ಆಗಬಹುದು.ಇಲ್ಲವೇ ಜುಲೈ-28ರಂದೇ ಮುಂದಿನ ಮೂರು ದಿನಗಳ ಟಿಕೆಟ್ ಕೂಡ ಬುಕ್ ಆಗಬಹುದು.
ಸದ್ಯದ ಮಾಹಿತಿ ಪ್ರಕಾರ, ವಿಕ್ರಾಂತ್ ರೋಣ ಚಿತ್ರದ ಬೆಂಗಳೂರು ಬುಕಿಂಗ್ ಕೊಂಡ ಡಲ್ ಆಗಿಯೇ ಇದೆ. ಉಳಿದಂತೆ
ನಿರ್ಮಾಪಕ ಜಾಕ್ ಮಂಜು ಹೇಳೋ ಪ್ರಕಾರ, ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಸುಮಾರು 3,200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ತೆರೆಕಾಣುತ್ತಿದೆ. ಕರ್ನಾಟಕದಲ್ಲಿ 360 ಥಿಯೇಟರ್‌ಗಳು ಬುಕ್ ಆಗಿವೆ ಅಂತಲೇ ಜಾಕ್ ಹೇಳಿಕೊಂಡಿದ್ದಾರೆ. ಚಿತ್ರ ಜುಲೈ-28ಕ್ಕೆ ರಿಲೀಸ್ ಆಗುತ್ತಿದೆ. ಆ ವೇಳೆ 900 ಆಗೋ ಸಾಧ್ಯತೆನೂ ಇದೆ.ಬಾಲಿವುಡ್ ನಲ್ಲಿ
900 ಥಿಯೇಟರ್ ಬುಕ್ ಆಗಿವೆ ಅಂತಲೇ ತಿಳಿಸಿದ್ದಾರೆ.ಯಾವುದಕ್ಕೂ ವೇಟ್ ಮಾಡಿ.
-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್
PublicNext
26/07/2022 11:28 am