ಮುಂಬೈ:ಬಾಲಿವುಡ್‌ನ ನಟ-ನಿರ್ಮಾಪಕ ಕರಣ್ ಜೋಹರ್ ನಡೆ-ನುಡಿ- ಎಲ್ಲವೂ ವಿಭಿನ್ನವಾಗಿಯೇ ಇವೆ. ಒಂದು ರೀತಿ ಕರಣ್ ಒಳಗೊಬ್ಬ ಹುಡುಗಿ ಇದ್ದಾಳೆ ಅನ್ನೋದೇ ಒಟ್ಟು ಮಾತು. ಅದನ್ನ ಕರಣ್ ಜೋಹರ್ ತಂದೆ ಯಶ್ ಜೋಹರ್ ಅಂದೇ ಕಂಡು ಕೊಂಡಿದ್ದು.
ಹೌದು.ಸ್ವತಃ ಕರಣ್ ಜೋಹರ್ ಈ ಸತ್ಯವನ್ನ ಈಗ ಹೇಳಿಕೊಂಡಿದ್ದಾರೆ. "ನಾನು ಜಯಪ್ರದಾ ಅವರ 'ದಫಲಿವಾಲೆ' ಹಾಡಿಗೆ ಡಾನ್ಸ್ ಮಾಡುತ್ತಿದ್ದೆ.ಆದರೆ, ನಮ್ಮ ತಂದೆ ಯಾವತ್ತೂ ಬೇಸರ ಪಡಲಿಲ್ಲ. ನನಗೆ ಪ್ರೋತ್ಸಾಹ ಮಾಡ್ತಾನೇ ಬಂದಿದ್ದರು" ಎಂದು ಕರಣ್ ಜೋಹರ್ ಹೇಳಿದರು.
ನನ್ನ ತಂದೆ ನನ್ನ ಎಂದೂ ಬೇರೆ ರೀತಿ ನೋಡಲೇ ಇಲ್ಲ. ಜಯಪ್ರದಾ ರೀತಿ ಡಾನ್ಸ್ ಮಾಡಿದಾಗಲೂ ನನ್ನ ತಂದೆ ಹೆಮ್ಮೆ ಪಟ್ಟರು ಹೊರತು,ಬೇಸರ ಪಡಲಿಲ್ಲ ಎಂದು ಕರಣ್ ಜೋಹರ್ ಹೇಳಿಕೊಂಡಿದ್ದಾರೆ.
PublicNext
09/07/2022 07:12 pm