ಮುಂಬೈ: ಸಿನಿಮಾ ಕ್ಷೇತ್ರದಲ್ಲಿ ಗಾಸಿಪ್‌ಗಳಿಗೆ ಏನು ಕಮ್ಮಿ ಇಲ್ಲ. ಅವು ಕೆಲವೊಮ್ಮೆ ನಿಜವಾಗುತ್ತವೇ ಕೂಡ. ಹೀಗೆ ಬಾಲಿವುಡ್‌ನಲ್ಲಿ ನಟ ಶಾರುಖ್ ಖಾನ್ ಹಾಗೂ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಗ್ಗೆ ವದಂತಿಗಳು ಹಬ್ಬಿದ್ದವು.
ಶಾರುಖ್ ಖಾನ್ ಅವರು ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಬಹುತೇಕ ಎಲ್ಲಾ ಶಾರುಖ್ ಖಾನ್ ಹಿಟ್ ಸಿನಿಮಾಗಳನ್ನು ಕರಣ್ ಜೋಹರ್ ನಿರ್ಮಿಸಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಇವರ ನಡುವಿನ ಸಂಬಂಧದ ಬಗ್ಗೆ ಗಾಸಿಪ್‌ಗಳು ಈ ಹಿಂದೆ ಬಾಲಿವುಡ್‌ನಲ್ಲಿ ವೈರಲ್ ಆಗಿದ್ದವು. ಶಾರುಖ್ ಖಾನ್ ಜೊತೆ ಕರಣ್ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದು, ಶಾರುಖ್ ಖಾನ್ ಜೊತೆ ಶಾರೀರಿಕ ಸಂಬಂಧವನ್ನೂ ಹೊಂದಿದ್ದರು ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಇದೀಗ ಕರಣ್ ತಮ್ಮ ಪುಸ್ತಕದ ಮೂಲಕ ಇವೆಲ್ಲದಕ್ಕೂ ಉತ್ತರ ನೀಡಿದ್ದಾರೆ.
ಇತ್ತೀಚೆಗಷ್ಟೇ ಕರಣ್ ಜೋಹರ್ ತಮ್ಮ 'ಅ ಅನ್ ಸೂಟಬಲ್ ಬಾಯ್' ಎಂಬ ಪುಸ್ತಕ ಹೊರತಂದಿದ್ದಾರೆ. ಅದರಲ್ಲಿ ಶಾರುಖ್ ಜೊತೆಗಿನ ಸಂಬಂಧದ ಬಗ್ಗೆ ಉತ್ತರ ನೀಡಿದ್ದಾರೆ.
"ನನ್ನ ಜೀವನದಲ್ಲಿ ನಾನು ಅನೇಕ ನಿಂದೆಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಯಾವುದೂ ನನ್ನನ್ನು ತುಂಬಾ ಕಾಡಲಿಲ್ಲ. ಕರಣ್ ಶಾರುಖ್ ಖಾನ್ ಜೊತೆ ಸಂಬಂಧವಿದೆ ಎಂಬ ಸುದ್ದಿ ಕೇಳಿ ನನ್ನ ಹೃದಯ ಒಡೆದುಹೋಯಿತು. ಸುದ್ದಿ ನನಗೆ ತುಂಬಾ ನೋವುಂಟು ಮಾಡಿತ್ತು. ಶಾರುಖ್ ನನಗೆ ತಂದೆಯಂತೆ" ಎಂದು ಕರಣ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಅಂಶ ಬೆಳಕಿಗೆ ಬರುತ್ತಿದ್ದಂತೆ ಮತ್ತೆ ಇವರಿಬ್ಬರ ಸಂಬಂಧದ ವಿಷಯ ವೈರಲ್ ಆಗುತ್ತಿದೆ.
PublicNext
25/06/2022 04:23 pm