ಮುಂಬೈ: ಹಾಸ್ಯ ಪ್ರಧಾನ ಚಿತ್ರ ನೋ ಎಂಟ್ರಿ ಸಿನಿಮಾ 2005ರಲ್ಲಿ ರಿಲೀಸ್ ಆಗಿತ್ತು. ಆಗ ಸಲ್ಲು ಅಭಿಮಾನಿಗಳು ಮುಗಿಬಿದ್ದು ಆ ಸಿನಿಮಾ ನೋಡಿದ್ದರು. ಕರಳು ಅಲ್ಲಾಡುವಂತೆ ನಗಿಸಿದ್ದ ಆ ಸಿನಿಮಾ ಸಕ್ಸಸ್ ಆಗಿತ್ತು.
ಇದೇ ವಿಚಾರವಾಗಿ ಈಗ ಹೊಸ ವಿಷಯ ಏನಪ್ಪ ಅಂದ್ರೆ ನೋ ಎಂಟ್ರಿ-2 ಚಿತ್ರ ಈಗಾಗಲೇ ಸೆಟ್ಟೇರಿದ್ದು ಇದೇ ವರ್ಷಾಂತ್ಯಕ್ಕೆ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇದು ಕೂಡ ಹಾಸ್ಯ ಪ್ರಧಾನ ಚಿತ್ರವಾಗಿದ್ದು ಇದರಲ್ಲಿ ಸಲ್ಲು ಭಾಯ್‌ಗೆ ಒಟ್ಟು ಜನ ಹೀರೋಯಿನ್‌ಗಳು ಜೊತೆಯಾಗಿದ್ದಾರೆ ಎನ್ನಲಾಗಿದೆ. ಒಂದೇ ಸಿನಿಮಾದಲ್ಲಿ ಹತ್ತು ಹೀರೋಯಿನ್‌ಗಳೆಂಬ ಸುದ್ದಿ ಕೇಳಿದ್ದ ಸಲ್ಮಾನ್ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಹಾಗೂ ಮೂವರು ನಾಯಕ ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಬೋನಿ ಕಪೂರ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡರೆ ಭೂಲ್ ಭುಲೈಯಾ-2 ಚಿತ್ರದ ನಿರ್ದೇಶಕ ಅನೀಸ್ ಬಾಜಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿರುವ ಈ ಚಿತ್ರ ನೋಡಲು ಬಾಲಿವುಡ್ ಸಿನಿಮಾ ಪ್ರಿಯರು ಕಾದು ಕೂತಿದ್ದಾರೆ.
PublicNext
17/06/2022 07:29 pm