ನವದೆಹಲಿ: ಟಾಲಿವುಡ್‌ನ ಯುವ ನಟಿ ಸಾಯಿ ಪಲ್ಲವಿ ಕೇವಲ ತಮ್ಮ ಡ್ಯಾನ್ಸ್‌ನಿಂದ, ಅಭಿನಯದಿಂದಲೇ ಅತಿ ಹೆಚ್ಚು ಗಮನ ಸೆಳೆದ ನಟಿ. ಆದರೆ, ಯಾವುದೇ ವಿವಾದಾತ್ಮಕ ಹೇಳಿಕೆ ಕೊಟ್ಟು ಗಮನ ಸೆಳೆದದ್ದೇ ಇಲ್ಲ. ಆದರೆ, ಇದೇ ಸಾಯಿ ಪಲ್ಲವಿ ಈಗೊಂದು ಪ್ರಶ್ನೆ ಕೇಳಿದ್ದಾರೆ.
ಹೌದು.ಕಾಶ್ಮೀರಿ ಪಂಡಿತರ ಮೇಲೆ ಆದರೆ, ಅದು ಹಲ್ಲೆ ಹಿಂಸೆ. ಅದೇ ಜೈ ಶ್ರೀರಾಮ್ ಹೆಸರಲ್ಲಿ ಮುಸ್ಲಿಂರ ಮೇಲೆ ಆಗ್ತಿರೋದು ಏನೂ..? ಧರ್ಮದ ಹೆಸರಲ್ಲಿ ಯಾವ ಧರ್ಮದವರನ್ನೂ ಹಿಂಸಿಸಬಾರದು ಅನ್ನೊದೇ ಸಾಯಿ ಪಲ್ಲವಿಯ ಒಟ್ಟು ಮಾತಿನ ತಾತ್ಪರ್ಯ.
ದಿ ಕಾಶ್ಮೀರಿ ಫೈಲ್ಸ್ ಚಿತ್ರದಲ್ಲಿ ಕಾಶ್ಮೀರ ಪಂಡಿತರ ಮೇಲೆ ಆದ ಹಲ್ಲೆಯನ್ನ ಹಿಂಸೆಯನ್ನ ನೋಡಿದ್ದೇವೆ. ಅದೇ ರೀತಿ ಗೋವುಗಳನ್ನ ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನ ಥಳಿಸಿ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಲಾಗಿದೆ. ಇಲ್ಲಿ ವ್ಯತ್ಯಾಸ ಎಲ್ಲಿ ಬಂತು ಅಂತಲೇ ಸಾಯಿ ಪಲ್ಲವಿ ಪ್ರಶ್ನೆ ಮಾಡಿದ್ದಾರೆ.
PublicNext
16/06/2022 07:19 am