ಮುಂಬೈ: ಬಾಲಿವುಡ್ ನ ದಬಾಂಗ್ ಚಿತ್ರದ ನಾಯಕಿ ಸೋನಾಕ್ಷಿ ಸಿನ್ಹಾ ಮತ್ತೊಂದು ಚಿತ್ರ ಮಾಡಿ ಆಗಿಯೇ ಇದೆ. ಆದರೆ, ಇದು ಇನ್ನು ರಿಲೀಸ್ ಆಗಿಯೇ ಇಲ್ಲ. ಇದರ ರಿಲೀಸ್ ಗಾಗಿಯೇ ಸೋನಾಕ್ಷಿ ಕಾಯುತ್ತಿದ್ದಾರೆ. ಆದರೆ, ಇದು ಬಿಗ್ ಪರೆದೆಗೆ ಬರೋ ಸಿನಿಮಾ ಅಲ್ಲವೇ ಅಲ್ಲ.
ಹೌದು. ಸೋನಾಕ್ಷಿ ಸಿನ್ಹಾ ಅಭಿನಯದ ಚಿತ್ರದ ಹೆಸರು ದಹಾಡ್. ಇದು ಒಂದು ವೆಬ್ ಸಿರೀಸ್ ಚಿತ್ರ. ಇದರಲ್ಲಿ ಸೋನಾಕ್ಷಿ ಸಿನ್ಹಾ ಒಬ್ಬ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷವೆಂದ್ರೆ ಈ ಚಿತ್ರ ಕೊಲೆಗಳ ಸುತ್ತವೇ ನಡೆಯೋ ಕಥೆ ಚಿತ್ರವೇ ಆಗಿದೆ. ಇದರ ರಿಲೀಸ್‌ಗೇನೆ ಸೋನಾಕ್ಷಿ ಸಿನ್ಹಾ ಕಾಯುತ್ತಿದ್ದಾರೆ. ಇದಾದ ಬಳಿಕ ಕುಕ್ಡಾ ಹೆಸರಿನ ಕಾಮಿಡಿ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಡಬಲ್ ಎಕ್ಸೆಲ್ ಹೆಸರಿನ ಚಿತ್ರಕ್ಕಾಗಿಯೇ 20 ಕೆಜಿ ತೂಕವನ್ನೂ ಹೆಚ್ಚಿಸಿಕೊಳ್ತಿದ್ದಾರೆ.
PublicNext
11/06/2022 02:58 pm