ವಿಜಯಪುರ : ವಿಶ್ವದಾದ್ಯಂತ ಇಂದು ಜೇಮ್ಸ್ ಚಿತ್ರ ಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಟಿಕೆಟ್ ಸಿಗದಿರುವ ಕಾರಣ ವಿಜಯಪುರದಲ್ಲಿ ಅಪ್ಪು ಅಭಿಮಾನಿಗಳ ಆಕ್ರೋಶಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆನಂದ ಸಿನೆಮಾ ಮಂದಿರದಲ್ಲಿ ಈ ಘಟನೆ ನಡೆದಿದ್ದು ಟಿಕೆಟ್ ಹಂಚಿಕೆ ಮಾಡುವಂತೆ ಅಪ್ಪು ಅಭಿಮಾನಿಗಳ ಆಗ್ರಹಿಸಿದ್ದಾರೆ.
ಇನ್ನು ಗುಂಪು ಗುಂಪಾಗಿ ಸೇರಿದಕ್ಕೆ ಅಭಿಮಾನಿಗಳನ್ನು ಚದುರಿಸಲು ಸಿಂದಗಿ ಪೊಲೀಸರು ಲಾಠಿ ಹಿಡಿಯುವ ಪ್ರಸಂಗವು ಬಂದಿದೆ. ಇನ್ನು ಪೊಲೀಸರು ಲಾಠಿ ಕೈಗೆತ್ತಿಕೊಳ್ಳುತ್ತಿದ್ದಂತೆ ಸ್ಥಳೀಯರು, ಯುವಕರು ಓಡಿ ಹೋಗಿದ್ದಾರೆ.
PublicNext
17/03/2022 07:01 pm