'ಸೋಜುಗಾದ ಸೂಜಿ ಮಲ್ಲಿಗೆ' ಎಂಬ ಹಾಡಿನ ಮೂಲಕ ಜನಮಾನಸದಲ್ಲಿ ಫೇಮಸ್ ಆಗಿದ್ದ ಗಾಯಕಿ ಅನನ್ಯ ಭಟ್ ಈ ಸಲದ ಶಿವರಾತ್ರಿಗೆ ಶಿವನ ಕುರಿತಾದ ಮತ್ತೊಂದು ಹಾಡನ್ನು ರಿಲೀಸ್ ಮಾಡಲಿದ್ದಾರೆ. 'ಶಿವ ಶಿವ' ಎಂಬ ಈ ಹಾಡಿನ ಆಡಿಯೋ ಫೆ.28ರಂದು ಬಿಡುಗಡೆ ಆಗಲಿದೆ.
ಅಂದಹಾಗೆ ಈ ಗೀತೆಯು ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರದಲ್ಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಹಾಗೂ ಸಂಗೀತ ನಿರ್ದೇಶಕ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ. “ಚಿತ್ರಕಥೆಗೂ ಮತ್ತು ಹಾಡಿಗೂ ಸಂಬಂಧವಿದೆ. ನಾಯಕನ ಸಹೋದರಿ ಶಿವನ ಭಕ್ತೆ. ಆಕೆ ಎದುರಿಸುವ ಕಷ್ಟಕ್ಕೆ ಶಿವ ಸ್ಪಂದಿಸಲಿಲ್ಲ ಎನ್ನುವ ನೋವಿಗಾಗಿ ಹಾಡಿದ ಗೀತೆ ಇದಾಗಿದೆ.
ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ನಟಿಸಿದ್ದಾರೆ. ಸಿನಿಮಾದ ಟೈಟಲ್ ಹೇಳುವಂತೆ ವೀರನಾಗಿಯೇ ಪ್ರಜ್ವಲ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಜತೆಯಾಗಿ ರಚಿತಾ ರಾಮ್ ನಟಿಸಿದ್ದು, ಹಿರಿಯ ನಟಿ ಶ್ರುತಿ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಕುಮಾರ್ ರಾಜ್ ಈ ಸಿನಿಮಾದ ನಿರ್ದೇಶಕರು.
PublicNext
24/02/2022 04:06 pm