ಬ್ರೆಜಿಲ್ ನ ಪ್ಲೇಬಾಯ್ ಮಾಡೆಲ್ ಜು ಐಸೆನ್ (Ju Isen) ತನ್ನ ಸಾಕು ನಾಯಿಗೆ 2 ಮಿಲಿಯನ್ ಡಾಲರ್(15,02,63,000) ನಷ್ಟು ಮೌಲ್ಯದ ಆಸ್ತಿ-ಪಾಸ್ತಿಯನ್ನ ಬಿಟ್ಟುಕೊಡ್ತಿದ್ದಾರೆ. ಹಾಗಂತ ಯಾರು ಗಾಸಿಪ್ ಹರಡಿಲ್ಲ.ಸ್ವತ: ಮಾಡೆಲ್ ಜು ಈ ವಿಚಾರವನ್ನ ಹೇಳಿಕೊಂಡಿದ್ದಾರೆ.
ತನ್ನ ಪ್ರೀತಿಯ ನಾಯಿ ಪ್ರಾನ್ಸಿಸ್ಕೋ ಆರಾಮಾಗಿರಬೇಕು, ಚೆನ್ನಾಗಿರಬೇಕು ಅಂತಲೇ
ಮಾಡೆಲ್ ಜು ಅಪಾರ್ಟ್ ಮೆಂಟ್ ಹಾಗೂ ಕಾರು ಬಿಟ್ಟುಕೊಡ್ತಿದ್ದಾರೆ. 35 ವರ್ಷದ ರೂಪದರ್ಶಿಗೆ ಮಕ್ಕಳಿಲ್ಲ. ಹಾಗಾಗಿಯೇ ತನ್ನ ಆಸ್ತಿಯನ್ನ ಪ್ರೀತಿಯ ನಾಯಿಗೆ ಮೀಸಲಿಡುತ್ತಿದ್ದಾರೆ. ಈ ಸುದ್ದಿ ಕೇಳಿದವ್ರು ಹೌದೇ..? ನಿಜವೇ ಅಂತಿದ್ದಾರೆ.
PublicNext
09/10/2021 08:10 pm