ಬಿಗ್ ಬಾಸ್ ಕನ್ನಡ ಸೀಸನ್ 8ನಲ್ಲಿ ಕೊನೆಯ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ರೋಚಕತೆ ಹೆಚ್ಚಿದೆ. ಕಳೆದ ಭಾನುವಾರ (ಜುಲೈ 25)ರಂದು ಇಬ್ಬರು ಎಲಿಮಿನೇಟ್ ಆಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ವಾರಾಂತ್ಯದ ಬದಲು ಮಿಡ್ವೀಕ್ನಲ್ಲಿ ಎಲಿಮಿನೇಷನ್ ಇಡಲಾಗಿದೆ.
ಈ ವಾರ ಮನೆಯಲ್ಲಿದ್ದ 9 ಮಂದಿಯಲ್ಲಿ ಐವರು ನಾಮಿನೇಟ್ ಆಗಿದ್ದರು. ಅದರಲ್ಲೀಗ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಪಡೆದಿದ್ದ ಚಕ್ರವರ್ತಿ, ಇದೀಗ ಆಟ ಮುಗಿಸಿ ಮನೆಯಿಂದ ಹೊರನಡೆದಿದ್ದಾರೆ.
ಸಾಮಾನ್ಯವಾಗಿ ವೀಕೆಂಡ್ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್ ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ವಿಡ್ವೀಕ್ ಎಲಿಮಿನೇಷನ್ ಆದಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್ ಆಗಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಅವರು ಪ್ರಿಯಾಂಕಾ ಎಲಿಮಿನೇಟ್ ಆದಾಗ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕಾರಣಕ್ಕೆ ಇವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆ.ಪಿ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.
PublicNext
28/07/2021 11:28 am