ನವದೆಹಲಿ:ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರೋ ಭಾರತೀಯರ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷ ಹೋಲಿಸಿದರೆ ಈ ವರ್ಷ ಕಡಿಮೆ ಆಗಿದೆ. 2020-2021 ಹೋಲಿಸಿದರೆ ಶೇಕಡ-13 ರಷ್ಟು ಇಳಿಕೆ ಕಂಡಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷ್ನಲ್ ಎಜುಕೇಷನ್ ಬಿಡುಗಡೆ ಮಾಡಿರೋ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಕೋವಿಡ್ ಅಟ್ಟಹಾಸಕ್ಕೇನೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಹಿಂಜರಿಯುತ್ತಿದ್ದಾರೆ ಎಂದು ಅಮೆರಿಕ ರಾಯಭಾರಿ ಕಚೇರಿ ಅಧಿಕಾರಿಗಳು ಪತ್ರಿಕಾಗೋಷ್ಠಿ ಮೂಲಕವೇ ಹೇಳಿದ್ದಾರೆ.
ಆದರೂ ಅಮೆರಿಕ ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿಯೇ ಇದೆ.ಚೀನಾದ ಬಳಿಕ ಅಮೆರಿಕಾದಲ್ಲಿಯೇ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು 2021 ರ ಓಪನ್ ಡೋರ್ ವರದಿ ತಿಳಿಸಿದೆ.
PublicNext
16/11/2021 12:43 pm