ದಾವಣಗೆರೆ: ಹೊನ್ನಾಳಿ ತಹಶೀಲ್ದಾರ್ ಕಚೇರಿಯಲ್ಲಿ ಮಾಜಿ ಶಾಸಕ ಶಾಂತನಗೌಡ ಅವರ ಅವಾಚ್ಯ ಶಬ್ದ ಬಳಕೆ ಖಂಡಿಸಿ ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೊನ್ನಾಳಿಯಲ್ಲಿ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿದ ಮಹಿಳೆಯರು, ತಹಶೀಲ್ದಾರ್ ರಶ್ಮಿ ಅವರಿಗೆ ಕಚೇರಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ಖಂಡನೀಯ. ಸೆ. 15ರಂದು ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿ ಮಹಿಳಾ ತಹಶೀಲ್ದಾರ್ ಗೆ ಮಾಜಿ ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸರಿಯಲ್ಲ ಎಂದರು.
ಮಳೆ ಪರಿಹಾರ ವಿಚಾರವಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯರ ವಿರುದ್ಧ ಆರೋಪ ಮಾಡಿರುವುದು ಶುದ್ಧ ಸುಳ್ಳು. ಎರಡು ಬಾರಿ ಶಾಸಕರಾಗಿದ್ದವರ ಇಂಥ ಅನಾಗರಿಕ ವರ್ತನೆ ಸಹಿಸುವಂತದ್ದಲ್ಲ ಎಂದು ಕಿಡಿಕಾರಿದರು.
Kshetra Samachara
18/09/2022 06:47 pm