ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕಲ್ಯಾಣ ಮಂಟಪಗಳಲ್ಲಿ ಕಳ್ಳತನ - ವ್ಯಕ್ತಿ ಬಂಧನ, 3.96 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ: ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 3.96 ಲಕ್ಷ ಬೆಲೆ ಬಾಳುವ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಡಿ.04 ರಂದು ರಾತ್ರಿ ಜಗಳೂರು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶರಣಪ್ಪ ತಂದೆ ಎಂಬುಔರ 55 ಗ್ರಾಂ ಬಂಗಾರ ಮತ್ತು ಮೊಬೈಲ್, ಬ್ಲೂಟೂತ್ ಹೆಡ್ ಸೆಟ್ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ತಂಡವು ತನಿಖೆ ಕೈಗೊಂಡಿದ್ದು, ವಿವಿಧಡೆ ಸಿ.ಸಿ.ಟಿ.ವಿ ಪರಿಶೀಲಿಸಿ ಆರೋಪಿ ಗುರುತನ್ನು ಪತ್ತೆ ಮಾಡಿದ್ದಾರೆ. ಆರೋಪಿ ಸಿದ್ದೇಶ‌ (19) ಕೂಲಿ ಕೆಲಸ, ವಾಸ:ಬಸವಾಪುರ ಗ್ರಾಮ, ಜಗಳೂರು ತಾಲ್ಲೂಕುಎಂದು ತಿಳಿದು ಬಂದಿದೆ.

ಆರೋಪಿಯಿಂದ ಸುಮಾರು 03 ಲಕ್ಷದ 85 ಸಾವಿರ ಬೆಲೆ ಬಾಳುವ 55 ಗ್ರಾಂ ಬಂಗಾರದ ಆಭರಣಗಳು ಮತ್ತು 10.000/- ರೂ ಬೆಲೆ ಬಾಳುವ ರೆಡ್‌ಮಿ ಕಂಪೆನಿಯ ಮೊಬೈಲ್, 1500/- ರೂ ಬೆಲೆ ಬಾಳುವ ಓಪೋ ಕಂಪೆನಿಯ ಬ್ಲೂಟೂತ್‌ನ್ನು ಜಪ್ತಿ ಮಾಡಿದ್ದಾರೆ. ಒಟ್ಟು 03.96.500/- ರೂ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಆರೋಪಿ ಹಿನ್ನೆಲೆ: ಆರೋಪಿತ ಸಿದ್ದೇಶ ಮೇಲೆ ಈ ಹಿಂದೆ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿರುತ್ತಾನೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

10/12/2024 02:58 pm

Cinque Terre

4.45 K

Cinque Terre

0

ಸಂಬಂಧಿತ ಸುದ್ದಿ