ದಾವಣಗೆರೆ : ದೇವರಿಗೆ ಬಿಟ್ಟ ಕೋಣಕ್ಕಾಗಿ, ಎರಡು ಗ್ರಾಮಗಳ ಮಧ್ಯೆ ಕಿತ್ತಾಟ ನಡೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಹರಿಹರ ತಾಲೂಕಿನ ಕುಣಿಬೆಳಕೆರೆ, ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಕುಣಿಬೆಳಕೆರೆ ಮತ್ತು ಕುಳಗಟ್ಟೆ ಗ್ರಾಮಸ್ಥರು ಪರಸ್ಪರ, ಇದು ನಮ್ಮ ಊರಿನ ಕೋಣ, ಇದು ನಮ್ಮ ಊರಿನ ಎಂದು ಕಿತ್ತಾಡಿದ್ದಾರೆ.
ಇದೇ ವಿಚಾರಕ್ಕೆ ಎರಡು ಗ್ರಾಮಸ್ಥರಿಂದ ಮಲೇಬೆನ್ನೂರು ಮತ್ತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೋಣವನ್ನ ಬಂಧಿಸಿ ಶಿವಮೊಗ್ಗದ ಮಹಾವೀರ ಗೋಶಾಲೆಗೆ ಕಳುಹಿಸಿದ್ದಾರೆ.
ಇನ್ನು ಕೋಣ ಯಾರಿಗೆ ಸೇರಿದ್ದು ಎಂದು ಕಂಡು ಹಿಡಿಯಲು ಪೊಲೀಸರು ಪಶುವೈದ್ಯಾಧಿಕಾರಿ ಮೊರೆ ಹೋಗಿದ್ದಾರೆ. ಕೋಣದ ವಯಸ್ಸು ಹಾಗೂ ದಂತ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ಅರವಿಂದ್ ಅವರು ಇದು ಆರು ವರ್ಷದ ಕೋಣ ಎಂದು ದೃಢಪಡಿಸಿದ್ದು, ಈ ಕುರಿತು ವೈದ್ಯಾಧಿಕಾರಿ ಪೊಲೀಸರಿಗೆ ವರದಿ ನೀಡಲಿದ್ದಾರೆ. ಆ ಬಳಿಕ ಪೊಲೀಸರು ಮುಂದಿನ ಕ್ರಮಕೈಗೊಳ್ಳುವ ಬಗ್ಗೆ ತಿಳಿಸಿದ್ದಾರೆ.
PublicNext
09/12/2024 09:42 pm