ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ - ಅಪರಾಧಿಗೆ 20 ವರ್ಷ ಕಠಿಣ ಜೈಲು, 35 ಸಾವಿರ ದಂಡ

ದಾವಣಗೆರೆ: ಅಪ್ರಾಪ್ತೆಯನ್ನು ಬೈಕ್‌ನಲ್ಲಿ ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 35 ಸಾವಿರ ದಂಡ ವಿಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬನಿಗೆ 2 ವರ್ಷ ಜೈಲು ಹಾಗೂ10 ಸಾವಿರ ದಂಡ, ಇನ್ನೊಬ್ಬ ಆರೋಪಿಗೆ 1 ವರ್ಷ ಜೈಲು, 5 ಸಾವಿರ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ತೀರ್ಪು ನೀಡಿದೆ.

ಹೊನ್ನಾಳಿ ತಾಲೂಕಿನ ನಿವಾಸಿಯಾದ 1ನೇ ಆರೋಪಿ ಎ.ಕೆ.ಹಾಲೇಶ, 2ನೇ ಆರೋಪಿ ಹಾಲೇಶಪ್ಪ ಅಲಿಯಾಸ್ ಹಾಲಪ್ಪ ಹಾಗೂ 3ನೇ ಆರೋಪಿ ರುದ್ರೇಶ ಶಿಕ್ಷೆಗೆ ಗುರಿಯಾದವರು. ಹಾಲೇಶನು ತನ್ನ ಊರಿನ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಕ್ಟೋಬರ್ 2020ರಲ್ಲಿ ಬೈಕ್‌ನಲ್ಲಿ ಅಪಹರಿಸಿಕೊಂಡು ಹೋಗಿದ್ದನು. ಈ ಕುರಿತು ಅಪ್ರಾಪ್ತೆಯ ತಂದೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ನಂತರ ಅಪ್ರಾಪ್ತೆಯನ್ನು ಮೊದಲ ಆರೋಪಿ ಹಾಲೇಶನು ಎರಡನೇ ಆರೋಪಿಯಾದ ಎ.ಕೆ.ಹಾಲೇಶಪ್ಪ ಅಲಿಯಾಸ್‌ ಹಾಲಪ್ಪನ ಮನೆಗೆ ಕರೆದೊಯ್ದು, ತಾನು ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಿ ಹೇಳಿ, ಆತನ ಮನೆಯಲ್ಲಿದ್ದನು. ಮೂರನೇ ಆರೋಪಿ ಎಚ್.ರುದ್ರೇಶನ ಹಾಲಪ್ಪನ ಮನೆಗೆ ಕರೆಸಿಕೊಂಡಿದ್ದರು. ಆರೋಪಿ ಹಾಲೇಶನು ರುದ್ರೇಶನನ್ನು ಕುಂದೂರು ಗ್ರಾಮಕ್ಕೆ ಕರೆದೊಯ್ದು, ಅಲ್ಲಿಂದ ಮೂವರೂ ಚಿತ್ರದುರ್ಗ ತಾಲೂಕಿನ ಚನ್ನಯ್ಯನಹಟ್ಟಿ ಗ್ರಾಮದ 4ನೇ ಆರೋಪಿ ಹನುಮಂತಪ್ಪನ ಮನೆಗೆ ಹೋಗಿ ಬಿಟ್ಟಿದ್ದರು.

ರಾತ್ರಿ 1ನೇ ಆರೋಪಿ ಎ.ಕೆ.ಹಾಲೇಶನು ಅಪ್ರಾಪ್ತ ಮೇಲೆ‌ ಬಲವಂತವಾಗಿ ಅತ್ಯಾಚಾರ ಎಸಗಿದ್ದನು. 2 ಮತ್ತು 3ನೇ ಆರೋಪಿಗಳು ಕೃತ್ಯಕ್ಕೆ ಸಹಕರಿಸಿದ್ದು, ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿತ್ತು.ಹೊನ್ನಾಳಿ ವೃತ್ತ ನಿರೀಕ್ಷಕರಾಗಿದ್ದ ಟಿ.ವಿ.ದೇವರಾಜ ಪ್ರಕರಣದ ತನಿಖೆ‌ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಮೂವರೂ ಆರೋಪಿಗಳ ಮೇಲಿನ ಆರೋಪ ಸಾಭೀತಾದ ಹಿನ್ನೆಲೆ ಮೂವರಿಗೆ ಶಿಕ್ಷೆ ಹಾಗೂ‌ ದಂಡ ವಿಧಿಸಿ ತೀರ್ಪು ನೀಡಿದರು. ಆರೋಪಿಗಳಿಂದ ವಸೂಲು ಮಾಡಿದ 50 ಸಾವಿರ ಹಣವನ್ನು ಸಂತ್ರಸ್ಥೆಗೆ ನೀಡುವಂತೆ ಹಾಗೂ ಸರ್ಕಾರದಿಂದ 4 ಲಕ್ಷ ಪರಿಹಾರ ನೀಡುವಂತೆ ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ವಕೀಲರಾದ ಸುನಂದಾ

ಮಡಿವಾಳರ್‌ ವಾದ ಮಂಡನೆ ಮಾಡಿದ್ದರು.

Edited By : Vijay Kumar
PublicNext

PublicNext

09/12/2024 10:26 pm

Cinque Terre

18.26 K

Cinque Terre

0

ಸಂಬಂಧಿತ ಸುದ್ದಿ