ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂತಿ ಸಂಗೀತವಾದಕನಿಗೆ : ಪದ್ಮಶ್ರೀ ಪ್ರಶಸ್ತಿ ಗರಿ

ಹೈದರಾಬಾದ್ : 73ನೇ ಗಣರಾಜ್ಯೋತ್ಸವಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಪದ್ಮ ಪ್ರಶಸ್ತಿಗೆ ತೆಲಂಗಾಣದ ಮೂವರು ಕಲಾವಿದರು ಭಾಜೀನರಾಗಿದ್ದಾರೆ. ಇದರಲ್ಲಿ 12 ಹಂತದ ತಂತಿ ಸಂಗೀತವಾದ ಕಿನ್ನೆರವನ್ನು ಜೀವಂತವಾಗಿಟ್ಟ ದರ್ಶನಂ ಮೋಗಿಲಯ್ಯ, ಕೂಚಿಪುಡಿ ನರ್ತಕಿ ಗದ್ದಂ ಪದ್ಮಜಾ ರೆಡ್ಡಿ ಮತ್ತು ಬುಡಕಟ್ಟು ಜಾನಪದ ಗಾಯಕ ರಾಮಚಂದ್ರಯ್ಯ ಕಲಾ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಸಿಕ್ಇದೆ.

ಮಹೆಬೂಬ್ ನಗರ ಜಿಲ್ಲೆಯವರಾದ ಮೋಗಿಲಯ್ಯ (70) ಅವರು ತಮ್ಮ ಕುಟುಂಬದ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡಿರುವುದು ಮಾತ್ರವಲ್ಲದೆ ಕಿನ್ನೇರವನ್ನು ಮರುಶೋಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪೂರ್ವಜರು ಸುಮಾರು 400 ವರ್ಷಗಳ ಹಿಂದೆ ವನಪರ್ತಿ ರಾಜನ ಆಸ್ಥಾನದಲ್ಲಿ ಇದನ್ನು ಆಡುತ್ತಿದ್ದರು ಎಂದು ಹೇಳಲಾಗುತ್ತದೆ.

ಐದನೇ ತಲೆಮಾರಿನ ಕಲಾವಿದ, ಮೋಗಿಲಯ್ಯ ಅವರು ತಮ್ಮ ಸಂಗೀತದಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ ಮಾತ್ರವಲ್ಲದೆ ಇವರು ತಮ್ಮ ಸಂಗೀತದ ಮೂಲಕ ಟಾಲಿವುಡ್ ಕೂಡ ಗಮನ ಸೆಳೆದಿದ್ದಾರೆ.

Edited By : Nirmala Aralikatti
PublicNext

PublicNext

27/01/2022 03:44 pm

Cinque Terre

240.7 K

Cinque Terre

5