ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲ್ಗೆಜ್ಜೆ ದೋಚಲು ವೃದ್ಧೆಯ ಕಾಲನ್ನೇ ಕತ್ತರಿಸಿದ ದರೋಡೆಕೋರರು.!

ಜೈಪುರ್: ಕಾಲ್ಗೆಜ್ಜೆ ದೋಚಲು ದರೋಡೆಕೋರರು 100 ವರ್ಷ ವಯಸ್ಸಿನ ವೃದ್ಧೆಯ ಕಾಲನ್ನೇ ಕತ್ತರಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

"ದರೋಡೆಕೋರರು ಹಲ್ಲೆ ನಡೆಸಿದ ಪರಿಣಾಮ ವೃದ್ಧೆ ತನ್ನ ಮನೆಯ ಸಮೀಪದಲ್ಲಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದರು. ಅವರ ಕುತ್ತಿಗೆಗೆ ಗಾಯಗಳಾಗಿವೆ" ಎಂದು ಪೊಲೀಸರು ಹೇಳಿದರು. "ನನ್ನ ಮಗಳು ಕರೆ ಮಾಡಿ ಅಜ್ಜಿ ಗಾಯಗೊಂಡಿರುವ ಬಗ್ಗೆ ನನಗೆ ತಿಳಿಸಿದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು" ಎಂದು ಸಂತ್ರಸ್ತೆಯ ಮಗಳು ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜೈಪುರ್ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Edited By : Vijay Kumar
PublicNext

PublicNext

09/10/2022 03:38 pm

Cinque Terre

52.37 K

Cinque Terre

2

ಸಂಬಂಧಿತ ಸುದ್ದಿ