ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಜಲು ಹೋದ ಮಕ್ಕಳು ಮಕ್ಕಳು ಕೆರೆ ಪಾಲು: ಹೈದಾರಾಬಾದ್ ಸಮೀಪದ ರಂಗಾರೆಡ್ಡಿಯಲ್ಲಿ ದುರಂತ

ಹೈದರಾಬಾದ್:‌ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ನೀರು ಪಾಲಾದ ಘಟನೆ ಹೈದರಾಬಾದ್ ಜಿಲ್ಲೆಯ ರಂಗಾರೆಡ್ಡಿ ತಾಲೂಕಿನ ಯಾಚರಂ ಮಂಡಲದ ತಾಡಿಪರ್ತಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕಳೆದ ವಾರ ರಂಗಾರೆಡ್ಡಿ ಜಿಲ್ಲೆಯಲ್ಲಿ ಸಾಹಸೋದ್ಯಮಕ್ಕೆಂದು ಅಗೆದಿದ್ದ ಹೊಂಡಕ್ಕೆ ಮೂವರು ಮಕ್ಕಳು ಬಿದ್ದು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಒಂದು ವಾರದ ನಂತರ, ಈ ದುರಂತ ಸಂಭವಿಸಿದೆ.

ಈ ನಾಲ್ವರು ಮನೆಗೆ ಹೋಗುವ ವೇಳೆ ಎರ್ರಗುಂಟಾ ಹೊಂಡಕ್ಕೆ ಈಜಲು ಇಳಿದಿದ್ದಾರೆ. ಇವರಿಗೆ ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಇಮ್ರಾನ್(9), ರೆಹಾನ್(10), ಖಾಲಿದ್ (12) ಮತ್ತು ಸಮ್ರೀನ್ (14) ಎಂದು ಗುರುತಿಸಲಾಗಿದೆ. ಮಕ್ಕಳ ಸಾವಿನ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕೆರೆಯಲ್ಲಿ ಆಟವಾಡಲು ಹೋಗಿದ್ದ ಮಕ್ಕಳು ಹೆಣವಾಗಿ ಹೊರ ಬಂದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Edited By : Nagaraj Tulugeri
PublicNext

PublicNext

03/10/2022 09:06 am

Cinque Terre

34.89 K

Cinque Terre

0