ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಲವರ್ ಜೊತೆ ಸುತ್ತಾಡಿ ಪತಿಗೆ ಮೋಸ: ಸಿಕ್ಕಿಬಿದ್ದ ಪ್ರಿಯಕರನಿಗೆ ಗಂಡನಿಂದ ಗೂಸಾ

ಲಕ್ನೋ: ಪ್ರಿಯತಮನೊಂದಿಗೆ ಜಾಲಿ ರೈಡ್ ಹೊರಟಿದ್ದ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗಂಡ ಪತ್ನಿಯ ಬಾಯ್‌ಫ್ರೆಂಡ್‌ಗೆ ಸರಿಯಾಗಿ ಗೂಸಾ ಕೊಟ್ಟಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ದಂಪತಿಗೆ ಮದುವೆ ಆಗಿ 10 ವರ್ಷ ಕಳೆದಿದೆ. ಒಬ್ಬ ಮಗಳೂ ಇದ್ದಾಳೆ‌. ಹೆಂಡತಿಗೆ ಲವರ್ ಇರುವ ವಿಚಾರ ಗಂಡನಿಗೆ ಮೊದಲೇ ಗೊತ್ತಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದೆ. ಹೆಂಡತಿಯ ಪರಸಂಗ ಪ್ರಕರಣವನ್ನು ಪ್ರತ್ಯಕ್ಷವಾಗಿ ಹಿಡಿಯಬೇಕು ಎಂದು ಸುಮ್ಮನಿದ್ದ ಗಂಡ ಆಕೆ ಒಬ್ಬಳೇ ಮನೆಯಿಂದ ಆಚೆ ಹೋಗಿದ್ದನ್ನು ಗಮನಿಸಿದ್ದಾನೆ.

ನಂತರ ಪುತ್ರಿಯೊಂದಿಗೆ ಗುಪ್ತವಾಗಿ ಪತ್ನಿಯನ್ನು ಹಿಂಬಾಲಿಸಿದ್ದಾನೆ. ಮುಂದೆ ಹೆಂಡತಿ ತನ್ನ ಪ್ರಿಯತಮನ ಬೈಲ್ ಹತ್ತಿದ್ದನ್ನು ಗಮನಿಸಿದ್ದಾ‌ನೆ. ಆ ವಾಹನವನ್ನು ಚೇಸ್ ಮಾಡಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದು ಲವರ್‌ಗೆ ಸರಿಯಾಗಿ ಗೂಸಾ ಕೊಟ್ಟಿದ್ದಾನೆ. ಮತ್ತು ಈ ಒಟ್ಟಾರೆ ಘಟನೆಯ ವಿಡಿಯೋವನ್ನು ಪತಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ಈಗ ಈ ವಿಡಿಯೋ ಎಲ್ಲೆಂದರಲ್ಲಿ ವೈರಲ್ ಆಗುತ್ತಿದೆ.

Edited By : Nagaraj Tulugeri
PublicNext

PublicNext

15/09/2022 10:58 pm

Cinque Terre

89.35 K

Cinque Terre

4