ಅಹಮದಾಬಾದ್: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು 7 ಮಂದಿ ಸಾವಿಗೀಡಾಗಿದ್ದು ಓರ್ವ ಗಂಭೀರವಾಗಿ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ಇಂದು ನಡೆದಿದೆ.
ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ಸುಮಾರು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದ ಆಸ್ಪೈರ್ 2 ನ ಏಳನೇ ಮಹಡಿಯಲ್ಲಿ ಮೇಕ್-ಶಿಫ್ಟ್ ಲಿಫ್ಟ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಘಟನೆಯ ಸಮಯದಲ್ಲಿ, ತಾತ್ಕಾಲಿಕ ಲಿಫ್ಟ್ ವ್ಯವಸ್ಥೆಯಲ್ಲಿ ಎಂಟು ಕಾರ್ಮಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಗಾಯಗೊಂಡಿರುವ ಓರ್ವ ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬರಬೇಕಿದೆ.
PublicNext
14/09/2022 03:18 pm