ಮನೆಯಿಂದ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ ಡ್ರೈವರ್ ಮತ್ತು ಮಕ್ಕಳ ಸಹಾಯಕಿಯನ್ನ ಮಕ್ಕಳು ಸೇರಿದಂತೆ ಪಾಲಕರು ದೇವರ ರೂಪದಲ್ಲಿ ಕಾಣುತ್ತಾರೆ. ಕಾರಣ ಮಕ್ಕಳನ್ನು ಸುರಕ್ಷಿತವಾಗಿ ಇಲ್ಲಿಂದ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆಂದು.
ಆದರೆ ನರ್ಸರಿ ಸ್ಕೂಲ್ ಗೆ ಹೋಗುತ್ತಿದ್ದ ಮೂರುವರೆ ವರ್ಷದ ಮಗುವಿನ ಮೇಲೆ ಡ್ರೈವರ್ ಅತ್ಯಾಚಾರ ಎಸೆಗಿ ವಿಕೃತಿ ಮೆರೆದಿರೋ ಆರೋಪ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಕೇಳಿಬಂದಿದೆ. ಸ್ಕೂಲ್ ಬಸ್ ಡ್ರೈವರ್ ನಿಂದಲೇ ಪೈಶಾಚಿಕ ಕೃತ್ಯ ನಡೆದಿದೆ ಎನ್ನಲಾಗಿದೆ.
ಇನ್ನು ಘಟನೆಯನ್ನ ಕಣ್ಣಾರೆ ಕಂಡ ಶಾಲಾ ಮಕ್ಕಳ ಸಹಾಯಕಿ, ಮುಚ್ಚಿ ಹಾಕಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಕಾಮುಕ ಡ್ರೈವರ್ ಹಾಗೂ ಮಕ್ಕಳ ಸಹಾಯಕಿಯನ್ನ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ…
ಮನೆಗೆ ಬಂದ ಮಗಳ ಮೈಮೇಲೆ ಕೆಲವು ಗಾಯಗಳಾಗಿದ್ದವು. ಇದನ್ನ ಗಮನಿಸಿದ ತಾಯಿ ಏನಾಯಿತು ಎಂದು ವಿಚಾರಿಸಿದ್ದಾರೆ. ಬಾಲಕಿ ಎಲ್ಲವನ್ನೂ ಹೇಳಿದ್ದಾಳೆ. ಕೂಡಲೇ ಪೋಷಕರು ಶಾಲಾ ಆಡಳಿತ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಇದನ್ನ ಒಪ್ಪಿಕೊಳ್ಳಲು ಶಾಲಾ ಆಡಳಿತ ಮಂಡಳಿ ಸಿದ್ಧವಿರಲಿಲ್ಲ ಎನ್ನಲಾಗಿದೆ.
ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಡ್ರೈವರ್ ವಿರುದ್ಧ ಪೋಕ್ಸ್ ಕಾಯ್ದೆ ದಾಖಲಿಸಿ ಬಂಧಿಸಿದ್ದಾರೆ. ಜೊತೆಗೆ ಪ್ರಕರಣವನ್ನ ಮುಚ್ಚಿ ಹಾಕಲು ಯತ್ನಿಸಿದ್ದ ಸಹಾಯಕಿಯನ್ನೂ ಅರೆಸ್ಟ್ ಮಾಡಿದ್ದಾರೆ.
PublicNext
13/09/2022 06:08 pm