ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಹಾಗೂ ಫೆನ್ನಿಯನ್ನು ಸಾಗಿಸುತ್ತಿದ್ದ ಗೂಡ್ಸ್ ಕ್ಯಾರಿಯರ್ ಅನ್ನು ತಾಲೂಕಿನ ಮಾಜಾಳಿ ತನಿಖಾ ಠಾಣೆಯ ಬಳಿ ಜಪ್ತಿಪಡಿಸಿಕೊಂಡಿರುವ ಅಬಕಾರಿ ಅಧಿಕಾರಿಗಳು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಮಾಜಾಳಿ ಅಬಕಾರಿ ತನಿಖಾ ಠಾಣೆಯಲ್ಲಿ ಖಚಿತ ಮಾಹಿತಿ ಮೇರೆಗೆ ಗೂಡ್ಸ್ ಕ್ಯಾರಿಯರ್ ಒಂದನ್ನು ತಡೆದು ಪರಿಶೀಲನೆ ನಡೆಸಿದಾಗ 474 ಲೀ. ಗೋವಾ ಮದ್ಯ ಹಾಗೂ 18 ಲೀ. ಗೋವಾ ಫೆನ್ನಿಯನ್ನು ಸ್ಕ್ರ‍್ಯಾಪ್ ಖಾಲಿ ಬಾಟಲಿಗಳೂಂದಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ಮದ್ಯಗಳ ಅಂದಾಜು ಮೌಲ್ಯ 6.34 ಲಕ್ಷ, ಗೋವಾ ಫೆನ್ನಿ ಅಂದಾಜು ಮೌಲ್ಯ 7,200 ಹಾಗೂ ವಾಹನದ ಮೌಲ್ಯ 10 ಲಕ್ಷ, ಸ್ಕ್ರ‍್ಯಾಪ್ ಬಾಟಲಿಗಳ ಮೌಲ್ಯ 44 ಸಾವಿರ, ಒಟ್ಟು ಅಂದಾಜು ಮೌಲ್ಯ 16.86 ಲಕ್ಷವಾಗಿದೆ. ಗೂಡ್ಸ್ ಕ್ಯಾರಿಯರ್ ಚಾಲಕ, ತೆಲಂಗಾಣ ರಾಜ್ಯದ ಬನುಪಟಿ ಜಗನ್ ಮೋಹನ್ ಎಂಬುವವನ್ನು ದಸ್ತಗಿರಿ ಮಾಡಲಾಗಿದ್ದು, ವಾಹನ ಮಾಲೀಕನ ಪತ್ತೆ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
PublicNext
07/09/2022 01:03 pm