ಚೆನ್ನೈ : ಬೆಲೆ ಬಾಳುವ ವಸ್ತುಗಳಿರುವ ಅಂಗಡಿಗಳಿಗೆ ಕನ್ನ ಹಾಕುವ ಕಳ್ಳರ ಮಧ್ಯೆ ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನ ತಿರುವಳ್ಳೂರಿನಲ್ಲಿ ನಡೆದಿದೆ.ಸದ್ಯ ಬಂಧಿತ ಆರೋಪಿಗಳನ್ನು ಪಳ್ಳಿಕರಣೈ ನಿವಾಸಿ ಸತೀಶ್ ಮತ್ತು ವಿಲುಪುರಂ ಮೂಲದ ಮುನಿಯನ್ ಎಂದು ಗುರುತಿಸಲಾಗಿದೆ. ಇದೀಗ ಇಬ್ಬರ ಬಳಿ ಇದ್ದ 14,000 ರೂಪಾಯಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕವರಾಯಪೇಟೈಯಲ್ಲಿರುವ ಸರ್ಕಾರಿ ಟಾಸ್ಮಾಕ್ ಮದ್ಯದ ಅಂಗಡಿಯನ್ನು ವ್ಯಾಪಾರ ಮುಗಿದ ನಂತರ ಬಂದ್ ಮಾಡಲಾಗಿತ್ತು. ಈ ವೇಳೆ ಇಬ್ಬರು ಕಳ್ಳರು ಅಂಗಡಿಯ ಗೋಡೆ ಕೊರೆದು ದೊಡ್ಡ ರಂಧ್ರ ಮಾಡಿ ಈ ಮೂಲಕ ಅಂಗಡಿ ಒಳಗೆ ನುಗ್ಗಿ ಮದ್ಯ ಕುಡಿಯುತ್ತಾ ತಾವು ಎಲ್ಲಿದ್ದೇವೆ ಎಂಬ ಸಮಯ ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ನಂತರ ರಾತ್ರಿ ವೇಳೆ ಗಸ್ತು ನಡೆಸುತ್ತಿದ್ದ ಪೊಲೀಸರು ಅಂಗಡಿ ಒಳಗಿನಿಂದ ಶಬ್ದ ಕೇಳಿ ಕಳ್ಳರು ಕೊರೆದ ಕಿಂಡಿಯಿಂದ ಖದೀಮರನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ವಶಕ್ಕೆ ಪಡೆದಿದ್ದಾರೆ.
PublicNext
05/09/2022 03:22 pm