ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ: ಅಪಘಾತ ಬಾಲಕ ಸ್ಥಳದಲ್ಲಿಯೇ ಸಾವು

ಕನಕಪುರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋವೊಂದು ಅಂಗಡಿಗೆ ನುಗ್ಗಿದ ಪರಿಣಾಮ ಹದಿಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಕಗ್ಗಲೀಪುರ ಪೋಲೀಸ್ ಠಾಣಾ ವ್ಯಾಪ್ತಿಯ ರಾಚೇನಮಡು ಗ್ರಾಮದಲ್ಲಿ ಭಾನುವಾರ ನಡೆದಿದೆ.

ರಾಚೇನಮಡು ಗ್ರಾಮದ ಜೀವನ್ ಮೃತ ದುರ್ದೈವಿಯಾಗಿದ್ದು, ತಲಘಟ್ಟಪುರದಿಂದ ಟೆಂಪೋವೊಂದು ಕಬ್ಬಿಣ ತುಂಬಿಕೊಂಡು ಕಗ್ಗಲೀಪುರದ ಕಡೆಗೆ ಬರುವಾಗ ಅಂಗಡಿಗೆ ನುಗ್ಗಿದ್ದರಿಂದ ಅಲ್ಲಿಯೇ ಇದ್ದ ಬಾಲಕ ಸಾವನ್ನಪ್ಪಿದ್ದಾನೆ. 407 ವಾಹನ ಚಾಲಕನಿಗೆ ಗಂಭೀರಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಶವ ಪರೀಕೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಗ್ಗಲೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಪ್ಪ.ಬಿ.ಗುತ್ತೇರ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾಗಿದೆ.

ವರದಿ: ಎಲ್.ಜಿ.ಜಯರಾಮನಾಯಕ್, ಪಬ್ಲಿಕ್ ನೆಕ್ಸ್ಟ್ ಕನಕಪುರ

Edited By : Vijay Kumar
PublicNext

PublicNext

04/09/2022 10:27 pm

Cinque Terre

45.56 K

Cinque Terre

0

ಸಂಬಂಧಿತ ಸುದ್ದಿ