ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ!

ಗದಗ : ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೃಶ್ಯವನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ ಸ್ಟಿಂಗ್ ಆಪರೇಷನ್ ಮಾಡಿದೆ. ಹೌದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಮದ್ಯಮಾರಾಟ ಮಾಡುತ್ತಿದ್ದರು ಅಬಕಾರಿ ಇಲಾಖೆಯವರು ಜಾಣಕುರುಡುತನ ತೋರುತ್ತಿದ್ದಾರೆ. ಮದ್ಯಮಾರಾಟ್ಟಕ್ಕೆ ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿದ್ರು ಡೋಂಟ್ ಕೇರ್ ಎನ್ನುವಂತೆ ಎಲ್ಲೆಂದರಲ್ಲಿ ಮದ್ಯಮಾರಾಟ ಮಾಡುತ್ತಿದ್ದಾರೆ.

ಗೌರಿ ಗಣೇಶ ಹಬ್ಬದ ಹಿನ್ನಲೆ ಮುಂಜಾಗೃತಾ ಕ್ರಮವಾಗಿ ಮದ್ಯಮಾರಾಟಕ್ಕೆ ನಿಷೇಧ ಹೇರಲಾಗಿತ್ತು ಆದರೂ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪಬ್ಲಿಕ್ ಕರೆಮಾಡಿ ಹೇಳಿದರು. ಇದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ ಸ್ಟಿಂಗ ಮೂಲಕ ಹೊರ ಹಾಕಲು ಪ್ರಯತ್ನಿಸಿತು.

ಲಕ್ಷ್ಮೇಶ್ವರ ಪಟ್ಟಣದ ಫ್ರೇಡ್ಸಬಾರ್,ಶ್ರೀನಿಧಿ ವೈನ್ಸ್, ಹೊಸ್ ಬಸ್ಟ್ಯಾಂಡ್ ಎಟಿಎಂ ಹತ್ತಿರ,ತಳ್ಳುವ ಗಾಡಿ ಸ್ಕೂಟರ್ ಡಿಕ್ಕಿಯಲ್ಲಿಟ್ಟು ಮದ್ಯ ಮಾರಾಟ ಮಾಡುತ್ತಿರುವ ಕೆಲವರು ನಿಗದಿತ ದರಕ್ಕಿಂತ 20 ರಿಂದ 30 ರೂಪಾಯಿ ಹೆಚ್ಚಿಗೆ ಹಾಕಿ ಮಾರಾಟ ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.

Edited By : Nagesh Gaonkar
PublicNext

PublicNext

31/08/2022 09:46 pm

Cinque Terre

92.6 K

Cinque Terre

7