ಚಿತ್ರದುರ್ಗ: ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಆರೋಪದಡಿ ಮುರುಘಾ ಶ್ರೀಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಸಂತ್ರಸ್ತ ವಿದ್ಯಾರ್ಥಿನಿಯರನ್ನು ಮೈಸೂರಿನಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ಬರಲಾಗಿದೆ.
ಬೆಳಗಿನ ಜಾವ ಸುಮಾರು 3.45ಕ್ಕೆ CWC ಅವರ ವಶಕ್ಕೆ ಮಕ್ಕಳನ್ನು ನೀಡಲಾಗಿದೆ. ಸದ್ಯ ಬಾಲಕಿಯರಿಬ್ಬರು ಬಾಲ ಮಂದಿರದಲ್ಲಿಯೇ ವಾಸವಾಗಿದ್ದಾರೆ. ತಡರಾತ್ರಿ ಮೈಸೂರಿಂದ ಬಿಗಿ ಭದ್ರತೆಯಲ್ಲಿ ಇಬ್ಬರು ಬಾಲಕಿಯರನ್ನು ಅಧಿಕಾರಿಗಳು ಕರೆತಂದಿದ್ದಾರೆ. ಬಾಲಕಿಯರ ಜೊತೆ ಮೈಸೂರು ಒಡನಾಡಿ ಸಂಸ್ಥೆಯ ಇಬ್ಬರೂ ಪ್ರತಿನಿಧಿಗಳಿರುವ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 10 ಗಂಟೆ ಬಳಿಕ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ಮುಂದೆ ಬಾಲಕಿಯರನ್ನು ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಮಕ್ಕಳ ಹೇಳಿಕೆ ಮತ್ತು ವೈದ್ಯಕೀಯ ಪರೀಕ್ಷೆ ಬಳಿಕ ಮುರುಘಾ ಶರಣರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಇನ್ನೂ ನೋಟಿಸ್ ನೀಡಿದ ಬಳಿಕ ಮುರುಘಾ ಶರಣನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ವಶಕ್ಕೆ ಪಡೆಯಬಹುದು ಎನ್ನಲಾಗಿದೆ.
PublicNext
28/08/2022 03:01 pm