ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

20 ಕ್ಕೂ ದನಗಳ ಮೇಲೆ ಆ್ಯಸಿಡ್ ಎರಚಿದ ಪಾಪಿಗಳು!

ಆನೇಕಲ್ : ತಮಿಳುನಾಡಿನ ಮೆಟ್ಟುಪಾಳ್ಯಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಗೇಡಿಗಳು ಬರೋಬ್ಬರಿ 20ಕ್ಕೂ ಹೆಚ್ಚು ಹಸು ಎಮ್ಮೆಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದಾರೆ.ನೆಟ್ಟುಪಾಳ್ಯಂ ಸಮೀಪದ ರಾಜಕುಮಾರ್ ಎಂಬವರಿಗೆ ಸೇರಿದ ಈ ಎಮ್ಮೆ ಹಾಗೂ ಹಸುಗಳ ಮೇಲಿನ ಕ್ರೌರ್ಯ ಕಂಡ ಜನ ಗಾಬರಿಯಾಗಿದ್ದಾರೆ.

ಇನ್ನು ರಾಜಕುಮಾರ್ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಆದರೆ ಯಾರೋ ಕಿಡಿಗೇಡಿಗಳು ಮೊನ್ನೆ ರಾತ್ರಿ ಆ್ಯಸಿಡ್ ಎರಚಿದ್ದು, ಬೆನ್ನು ತಲೆ ಕಾಲು ಹಾಗೂ ದೇಹದ ಹಲವು ಭಾಗಗಳಿಗೆ ಆ್ಯಸಿಡ್ ಬಿದ್ದು ತೀವ್ರ ರಕ್ತಸ್ರಾವವಾಗಿದೆ.ated A

ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಕೃತ್ಯವನ್ನು ಮಾಡಿರುವಂತಹ ಕಿಡಿಗೇಡಿಗಳು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಅಮಾನುಷ ಕೃತ್ಯ ಎಸಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Edited By : Nirmala Aralikatti
PublicNext

PublicNext

24/08/2022 10:49 pm

Cinque Terre

50.12 K

Cinque Terre

4

ಸಂಬಂಧಿತ ಸುದ್ದಿ