ಕನಕಪುರ : ತಾಲೂಕಿನ ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದ ಸಾಜ್ ಫುಡ್ ಪ್ಯಾಕ್ಟರಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಹಾರೋಹಳ್ಳಿ ಪೋಲೀಸರು ಒಂದು ಕೆ.ಜಿ ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬನ್ಷಕುಮಾರ್ ಚಂದ್ರಕಾರ್(೨೨) ಎಂದು ಗುರುತಿಸಲಾಗಿದ್ದು. ಆರೋಪಿ ಸಾಜ್ ಫುಡ್ ಪ್ಯಾಕ್ಟರಿ ಹತ್ತಿರ ಗುಂಪುಕಟ್ಟಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿರುವ ಹಾರೋಹಳ್ಳಿ ಪೋಲೀಸರು ೧ ಕೆಜಿ ಒಣಗಾಂಜಾ ಮತ್ತು ೧೨೦೦ ರೂ ನಗದು ಸ್ಥಳದಲ್ಲಿ ವಶಪಡಿಸಿಕೊಂಡ ಪೋಲೀಸರು, ಆರೋಪಿಯನ್ನು ವಿಚಾರಣೆಗೊಳಪಡಿಸಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ೨.೫ ಲಕ್ಷ ಬೆಲೆ ಬಾಳುವ ಒಟ್ಟು ೫ ಕೆಜಿ ಗಾಂಜಾ ವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಒರಿಸ್ಸಾ ಮೂಲದವನಾಗಿದ್ದು ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಪಾರ್ಶಾ ನ್ಯುಟ್ರಿಷಿಯನ್ ಪ್ರೈ ಲಿ ಕಂಪನಿಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು ಕಳೆದ ವಾರ ಈತ ಅವರ ಊರಿಗೆ ಹೋಗಿದ್ದು ಅಲ್ಲಿಂದ ೫ ಕೆಜಿ ಒಣ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನಾದರಿಸಿ ದಾಳಿ ನಡೆಸಿದ ವೇಳೆ ಸಿಕ್ಕಿದ್ದಾನೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂದು ಹಾರೋಹಳ್ಳಿ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ರವಿ ತಿಳಿಸಿದರು. ದಾಳಿಯಲ್ಲಿ ಎಸೈ ನಟರಾಜು, ಸಿಬ್ಬಂದಿಗಳಾದ ಕೊಪ್ಪಸಿದ್ದಯ್ಯ, ಮಧು, ಮಂಜುನಾಥ್, ಶ್ರೀನಿವಾಸ್, ಶ್ರೀಕಾಂತ್, ಕೃಷ್ಣಮೂರ್ತಿ, ಅಲ್ತಾಫ್, ಸತೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
PublicNext
20/08/2022 10:42 pm