ಮಧುಗಿರಿ: ಪಟ್ಟಣದ 19 ನೇ ವಾರ್ಡ್ ನಲ್ಲಿ ಸೋಮವಾರ ಅನ್ನಪೂರ್ಣ ಮಧುಸೂದನ್ ಎಂಬುವರ ಮನೆಗೆ ಅನಾಮಿಕ ವ್ಯಕ್ತಿಗಳು ಬಂದು ಒಡವೆಗಳನ್ನು ಪಾಲೀಶ್ ಮಾಡಿಕೊಡುತ್ತೇವೆ ಎಂದು ಹೇಳಿ ಬರೋಬ್ಬರಿ 45 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದರು.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅದರಂತೆ ನಿನ್ನೆ ಮಧುಗಿರಿ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಅದರಂತೆ ಇಂದು ತುಮಕೂರು ಜಿಲ್ಲಾ ಪೊಲೀಸ್ ಅಡಿಸಿನಲ್ ಎಸ್ಪಿ ಉದೇಶ್ ರವರು ಕಳ್ಳತನವಾಗಿದ್ದ ಮನೆಗೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಮಧುಗಿರಿ ಸರ್ಕಲ್ ಇನ್ಸ್ ಪೆಕ್ಟರ್ ಎಂ.ಎಸ್ ಸರ್ದಾರ್ ಮತ್ತು ಕಾನ್ಸ್ ಟೇಬಲ್ ಗಳು ಇದ್ದರು.
PublicNext
02/08/2022 08:28 pm