ವರದಿ- ಸಂತೋಷ ಬಡಕಂಬಿ.
ಗೋಕಾಕ: ಮಹಿಳೆಯರ ಕೊರಳಲ್ಲಿಯ ಚಿನ್ನದ ಆಭರಣ ಕಳ್ಳತನ ಮಾಡಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟೋದ್ರಲ್ಲಿ ಸ್ಥಳೀಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಗೋಕಾಕ ಶಹರ ಠಾಣೆ ವ್ಯಾಪ್ತಿಯಲ್ಲಿ ಕೆಲವು ಆಭರಣ ಕಳ್ಳತನ ಹಾಗೂ ಮೋಟಾರ್ ವಾಹನಗಳ ಕಳ್ಳತನ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಸಂಜೀವಕುಮಾರ ಪಾಟೀಲ, ಹೆಚ್ಚುವರಿ ಎಸ್‌ಪಿ ಮಹಾನಿಂಗ ನಂದಗಾಂವ, ಡಿವೈಎಸ್‌ಪಿ ಮನೋಜಕುಮಾರ ಮಾರ್ಗದರ್ಶನದಲ್ಲಿ ಗೋಕಾಕ ಸಿಪಿಐ ಗೋಪಾಲ ರಾಠೋಡ ನೇತ್ರತ್ವದಲ್ಲಿ ತಂಡ ರಚಿಸಿ ಬಂಗಾರ ಆಭರಣಗಳ ಕಳ್ಳತನ ಮಾಡಿರುವ ಖದೀಮರನ್ನು ಹಡೆಮುರಿ ಕಟ್ಟಿದ್ದಾರೆ.
ಜುಲೈ25 ರಂದು ಬೆಳ್ಳಂ ಬೆಳಿಗ್ಗೆ ನಗರದ ಯೋಗಿಕೊಳ್ಳ ರಸ್ತೆಯಲ್ಲಿ ಸಂಶಯಾಸ್ಪದವಾಗಿ ಬೈಕನಲ್ಲಿ ತಿರುಗಾಡುತ್ತಿದ್ದ ಮೂವರನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವ ಎರಡು ಬೈಕಗಳು ನಗರದಲ್ಲಿ ಕಳ್ಳತನವಾಗಿರುವ ಬೈಕ್‌ಗಳೆಂದು ತಿಳಿದು ಬಂದಿದೆ. ಆರೋಪಿತರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ಫೆಬ್ರುವರಿ ತಿಂಗಳಲ್ಲಿ ಮಾರುಕಟ್ಟೆಯ ಪ್ರದೇಶದ ಗುಲ್ಲ ಅಂಗಡಿಯ ಹತ್ತಿರ ಒರ್ವ ಮಹಿಳೆಯ ಕೊರಳಲ್ಲಿಯ ಚಿನ್ನದ ಮಂಗಲಸೂತ್ರ ಮತ್ತು ವಿದ್ಯಾನಗರದ ಬಸವ ಮಂದಿರ ಸಮೀಪ ಇನ್ನೊರ್ವ ಮಹಿಳೆಯ ಕೊರಳಲ್ಲಿಯ ಮಂಗಲಸೂತ್ರ ಕಳ್ಳತನ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿತರಿಂದ ಕಳ್ಳತನವಾದ 80 ಸಾವಿರ ರೂ ಮೌಲ್ಯದ ಎರಡು ಬೈಕ್ ಮತ್ತು 2.75 ಲಕ್ಷ ಮೌಲ್ಯದ 50 ಗ್ರಾಂ ಮಂಗಲಸೂತ್ರಗಳನ್ನು ಪೋಲಿಸರು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗೋಕಾಕ ಸಿಪಿಐ ಗೋಪಾಲ ರಾಠೋಡ ಅವರ ನೇತ್ರತ್ವದಲ್ಲಿ ತಂಡದ ಶಹರ ಠಾಣೆ ಪಿಎಸ್‌ಐ ಎಮ್ ಡಿ ಘೋರಿ, ಎಎಸ್‌ಐ ರಮೇಶ ಹಡಪದ, ಸಿಬ್ಬಂದಿಯಾದ ಬಿ.ವಿ ನೆರಲೆ, ಸುರೇಶ ಈರಗಾರ, ಮಲ್ಲಪ್ಪ, ಸಚಿನ್ ಹೊಳೆಪ್ಪಗೋಳ, ವಿಠ್ಠಲ ನಾಯಕ, ರಮೇಶ ಮರನಾಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
PublicNext
26/07/2022 10:12 am