ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಸೆವಾಲಾ ಹಂತಕರಿಬ್ಬರನ್ನ ಕೊಂದು ಹಾಕಿದ ಪಂಜಾಬ್ ಪೊಲೀಸ್!

ಪಂಜಾಬ್: ಗಾಯಕ ಮೂಸೆವಾಲಾ ಹತ್ಯೆ ಮಾಡಿದ್ದ ಇಬ್ಬರನ್ನ ಪಂಜಾಬ್ ಪೊಲೀಸರು ಇಂದು ಎನ್‌ಕೌಂಟರ್ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇವರನ್ನ ಬಂಧಿಸಲು ಹೋಗಿದ್ದ ಪೊಲೀಸರು ಮತ್ತು ಗ್ಯಾಂಗ್‌ಸ್ಟರ್ ಮಧ್ಯೆ ಸುದೀರ್ಘ ಗುಂಡಿನ ಚಕಮಕಿ ಕೂಡ ನಡೆದಿದೆ

ಪಾಕ್ ಗಡಿ ಸಮೀಪದ ಅಮೃತಸರ್ ಜಿಲ್ಲೆಯ ಚೋಚಾ ಭಕ್ನಾ ಗ್ರಾಮದಲ್ಲಿಯೇ ಈ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ ನಲ್ಲಿ ಮೂಸೆವಾಲಾ ಹಂತಕರಾದ ಶಾರ್ಪ್ ಶೂಟರ್ ಜಗರೂಪ್ ರೂಪಾ,ಮನ್‌ಪ್ರೀತ್ ಎಂಬಾತನನ್ನ ಪೊಲೀಸರು ಹೊಡೆದು ಹಾಕಿದ್ದಾರೆ.

ಈ ಒಂದು ಪೊಲೀಸ್ ಕಾರ್ಯಾಚರಣೆಯಲ್ಲಿ 8 ಜನ ಪೊಲೀಸರು ಹಾಗೂ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ.

Edited By :
PublicNext

PublicNext

20/07/2022 05:53 pm

Cinque Terre

75.51 K

Cinque Terre

8