ನವದೆಹಲಿ: ವಿವಾದಾತ್ಮಕ ಹೇಳಿಕೆವೊಂದನ್ನು ನೀಡಿ ಬಿಜೆಪಿ ವಕ್ತಾರೆ ಸ್ಥಾನದಿಂದ ಅಮಾನತು ಆಗಿರುವ ನಾಯಕಿ ನೂಪುರ್ ಶರ್ಮಾ ಹತ್ಯೆಗೆ ಮಾಸ್ಟರ್ ಪ್ಲಾನ್ ವೊಂದು ನಡೆದಿದೆ.ಶರ್ಮಾ ಹತ್ಯೆಗೆ 11 ಇಂಚಿನ ಚಾಕು ಸಮೇತ ಪಾಕಿಸ್ತಾನದಿಂದ ವ್ಯಕ್ತಿಯೋರ್ವ ಗಡಿ ದಾಟಿ ಬಂದಿದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ನೂಪುರ್ ಶರ್ಮಾ ಹತ್ಯೆ ಕೂಡ ನಡೆದುಹೋಗಿರುತ್ತಿತ್ತೇನೋ? ಆದರೆ ಬಿಎಸ್ಎಫ್ ಸಿಬ್ಬಂದಿಯ ಜಾಗ್ರತೆಯಿಂದಾಗಿ ಹತ್ಯೆಗೆಂದು ಬಂದಿದ್ದ ಪಾಕಿಸ್ತಾನದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.
ಜುಲೈ 16ರಂದು ಹಿಂದುಮಲ್ಕೋಟ್ ಬಾರ್ಡರ್ ಔಟ್ ಪೋಸ್ಟ್ ನಲ್ಲಿ ಭದ್ರತಾ ಸಿಬ್ಬಂದಿ ಈತನ ಚಲನವಲನದ ಬಗ್ಗೆ ಅನುಮಾನ ಮೂಡಿ ವಶಕ್ಕೆ ಪಡೆದಿದ್ದರು. ಈತನನ್ನು ಇಂಟೆಲಿಜೆನ್ಸ್ ಬ್ಯೂರೋದವರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ನೂಪುರ್ ಶರ್ಮಾ ಹತ್ಯೆಗಾಗಿ ಬಂದಿದ್ದಾಗಿ ಈತ ಒಪ್ಪಿಕೊಂಡಿದ್ದಾನೆ. ಹತ್ಯೆ ಮಾಡುವುದಕ್ಕೂ ಅಜ್ಮೇರ್ ದರ್ಗಾಗೆ ಭೇಟಿ ಕೊಡುವ ಯೋಜನೆ ಹಾಕಿಕೊಂಡಿದ್ದ ಎಂಬುದೂ ವಿಚಾರಣೆ ವೇಳೆ ತಿಳಿದುಬಂದಿದೆ. ಐಬಿ, ರಾ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಅಧಿಕಾರಿಗಳ ಜಂಟಿ ತಂಡ ಈತನನ್ನು ವಿಚಾರಣೆಗೆ ಒಳಪಡಿಸುತ್ತಿದೆ.
PublicNext
20/07/2022 07:53 am