ಚಾಮರಾಜನಗರ: ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅರ್ಚಕರೊಬ್ಬರು ಕುಸಿದು ಬಿದ್ದು ಅಸುನೀಗಿದ್ದಾರೆ.
ನಾಗಣ್ಣ (40) ಮೃತಪಟ್ಟ ಅರ್ಚಕರು. ಒಂದೂವರೆ ವರ್ಷದ ಬಳಿಕ ಇವರಿಗೆ ಮಾದಪ್ಪನಿಗೆ ಪೂಜೆ ಸಲ್ಲಿಸುವ ಸರದಿ ಬಂದಿತ್ತು. ಇಂದು ಬೆಳಗ್ಗೆ 4 ಗಂಟೆಗೆ ತೆರಳಿ ಪೂಜೆ ಮಾಡುವಾಗ ಹಠಾತ್ತಾಗಿ ಕುಸಿದು ಬಿದ್ದಿದ್ದಾರೆ. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಹನೂರು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ಅಸುನೀಗಿದರು ಎಂದು ತಿಳಿದುಬಂದಿದೆ.
PublicNext
19/07/2022 10:00 am