ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿ ಹತ್ಯೆಗೆ ಸಂಚು : ಇಬ್ಬರು ಅರೆಸ್ಟ್

ಪಾಟ್ನಾ: ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಬಿಹಾರ್ ಪೊಲೀಸರು ಬಂಧಿಸಿದ್ದಾರೆ.ಜುಲೈ 12ರ ಪಾಟ್ನಾ ಪ್ರವಾಸದ ವೇಳೆ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಆರೋಪಿಗಳು ಜುಲೈ 6 ಮತ್ತು 7ರಂದು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. 2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಳ್ವಿಕೆ ಜಾರಿ ಮಾಡುವುದು ಈ ತಂಡದ ಗುರಿಯಾಗಿತ್ತು.

ಬಂಧಿತರನ್ನು ಜಾರ್ಖಂಡ್ ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅವರ ಪತ್ನಿ ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ.ಜುಲೈ 11ರಂದು ಖಚಿತ ಮಾಹಿತಿ ಮೇರೆಗೆ ಬಿಹಾರದ ನಯಾ ಟೋಲಾ ಪ್ರದೇಶದಲ್ಲಿ ದಾಳಿ ನಡೆಸಿ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಶಂಕಿತ ಭಯೋತ್ಪಾದಕರಿಂದ ಪಿಎಫ್ ಐ ಕರಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ದಂಪತಿ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ದೇಶವಿರೋಧಿ ಅಭಿಯಾನ ನಡೆಸಲು ಹಣ ಪಡೆಯುತ್ತಿದ್ದರು, PFIಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (SIMI)ದೊಂದಿಗೆ ಸಂಬಂಧ ಹೊಂದಿದ್ದರು.

Edited By : Nirmala Aralikatti
PublicNext

PublicNext

14/07/2022 06:36 pm

Cinque Terre

47.47 K

Cinque Terre

47

ಸಂಬಂಧಿತ ಸುದ್ದಿ