ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ : ಜಾನುವಾರು ಅಪಹರಿಸುತ್ತಿದ್ದ ಅಂತರ್ ಜಿಲ್ಲಾ ಖದೀಮರ ಬಂಧನ

ಕೊರಟಗೆರೆ: ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಕಳವು ಮಾಡಲಾಗಿದ್ದ 10 ಜಾನು ವಾರುಗಳ ಜಾಡು ಹಿಡಿದ ಕೊರಟಗೆರೆ ಪೊಲೀಸ್ ತಂಡ 3 ಜನ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

ಕೋಳಾಲ ಸರಹದ್ದಿನ ಗೋಕುಲ ಗ್ರಾಮದ ದಿನೇಶ್ ಎಂಬ ರೈತನ 2 ಸೀಮೆ ಹಸುಗಳು, ಮಧ್ಯ ವೆಂಕಟಾಪುರ ರಾಜು ಎಂಬುವರ 2 ಸೀಮೆ ಹಸುಗಳು, ಲಕ್ಕೈನ್ ಪಾಳ್ಯದ ಲಕ್ಷ್ಮಯ್ಯನ 1 ಹಸು, ಮೂಡ್ಲುಪಾಳ್ಯ ಸುಬ್ರಾಯನ 1 ಹಸು, ತಿಮ್ಮಸಂದ್ರ ಹರ್ಷವರ್ಧನನ 2 ಹಸುಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ರೈತರ ಜಾನುವಾರುಗಳು ಇತ್ತೀಚೆಗೆ ಸರಣಿ ಕಳ್ಳತನ ಕೊರಟಗೆರೆ ಪೊಲೀಸ್ ನವರಿಗೆ ತಲೆ ನೋವಾಗಿ ಪರಿಣಮಿಸಿತ್ತು.

ಅದರ ಜಾಡು ಹಿಡಿದು ಹೊರಟ ತಂಡ 2.5 ಲಕ್ಷರು ನಗದು ಹಾಗೂ ಅದಕ್ಕೆ ಬಳಸುತ್ತಿದ್ದ ಇನ್ನಿತರ ವಸ್ತುಗಳನ್ನು ಮಾಲು ಸಹಿತ ಸೆರೆಹಿಡಿದಿದ್ದಾರೆ.

Edited By :
PublicNext

PublicNext

10/07/2022 08:57 am

Cinque Terre

50.85 K

Cinque Terre

3