ದಾವಣಗೆರೆ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯನ್ನೇ ಕೊಲೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ಕತ್ತಲಗೆರೆ ಬಳಿಯ ಎಸ್.ಆರ್. ಕ್ಯಾಂಪ್‌ನಲ್ಲಿ ನಡೆದಿದೆ.
ಎಸ್.ಆರ್. ಕ್ಯಾಂಪ್‌ನ 60 ವರ್ಷದ ಮಂಜುನಾಥ್ ಎಂಬುವವರೇ ಕೊಲೆಯಾದವರು. ಇನ್ನೂ 32 ವರ್ಷದ ತಿಪ್ಪೇಶ್ ಕೊಲೆ ಮಾಡಿದ ಪುತ್ರ. ಮನೆ ವಿಚಾರಕ್ಕೆ ಸಂಬಂಧಿಸಿದಂತೆ ರಾತ್ರಿ ತಂದೆ ಹಾಗೂ ಮಗನ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಮಗನೇ ತಂದೆಯನ್ನು ಥಳಿಸಿದ್ದು, ಈ ವೇಳೆ ಕುಸಿದು ಬಿದ್ದು ಮಂಜುನಾಥ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಿ. ಬಸರಗಿ, ಚನ್ನಗಿರಿ ಡಿವೈಎಸ್ಪಿ ಸಂತೋಷ್, ಸಂತೇಬೆನ್ನೂರು ಸಿಪಿಐ ಮಹೇಶ್, ಬಸವಾಪಟ್ಟಣದ ಠಾಣೆಯ ಪೊಲೀಸರು ಸಹ ಇದ್ದರು.
PublicNext
07/07/2022 07:26 pm