ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಪುತ್ರನ ಅಸಲಿ ಬಣ್ಣ ಬಯಲು ಮಾಡಲು ಕೋರ್ಟಿಗೆ 41 ವರ್ಷ ಬೇಕಾಯಿತಂತೆ

ಪಾಟ್ನಾ : ಒಂದು ಪ್ರಕರಣದ ವಿಚಾರಣೆ ನಡೆದು ತೀರ್ಪು ಬರಬೇಕಾದೆ ಎಷ್ಟು ಹಿಡಿಯ ಬಹುದು? ಅಬ್ಬಬ್ಬಾ ಅಂದ್ರೆ ಐದಾರು ವರ್ಷ. ಆದರೆ ನಕಲಿ ಪುತ್ರನೊಬ್ಬನ ಪ್ರಕರಣ ವಿಚಾರಣೆ ನಡೆದು ತೀರ್ಪು ಬರಬೇಕಾದರೆ 41 ವರ್ಷ ತೆಗೆದುಕೊಂಡಿದೆ ಅಂದರೆ ನಂಬಲು ಸಾಧ್ಯವೆ? ಹೌದು ನಂಬಲೇ ಬೇಕಾಗಿದೆ. ಇಷ್ಟು ಮಾತ್ರವಲ್ ಇದೊಂದು ದಾಖಲೆ ಎಂದೇ ಹೇಳಬೇಕು.

41 ವರ್ಷಗಳಲ್ಲಿ 12 ನ್ಯಾಯಾಧೀಶರು ಈ ಪ್ರಕರಣ ವಿಚಾರಣೆ ನಡೆಸಿದ್ದರು. ಕೊನೆಗೆ ಕಳೆದ ವರ್ಷ 44 ದಿನಗಳ ನಿರಂತರ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಲಾಗಿದೆ.

ಕಾಣೆಯಾದ ಶ್ರೀಮಂತ ಜಮೀನ್ದಾರ ಪುತ್ರನಂತೆ ನಟಿಸಿ, 41 ವರ್ಷ ಅದೇ ಮನೆಯಲ್ಲಿದ್ದ ಕುಟುಂಬಕ್ಕೆ ಮೋಸ ಮಾಡಿದ ಗೋಸೈನ್ ಎಂಬಾತ ಕಂಬಿ ಎಣಿಸಬೇಕಾಗಿದೆ.

1981 ರಲ್ಲಿ ನಡೆದ ಪ್ರಕರಣವಿದು. ನಳಂದ ಜಿಲ್ಲೆಯ ಶ್ರೀಮಂತ ಮತ್ತು ಪ್ರಭಾವಿ ಜಮೀನ್ದಾರರ ಏಕೈಕ ಪುತ್ರ ಕನ್ಹಯ್ಯಾ ಸಿಂಗ್ ನಾಪತ್ತೆಯಾಗಿದ್ದ.

ಕನ್ಹಯ್ಯಾ ಅವರನ್ನು ಹುಡುಕುವ ಪ್ರಯತ್ನ ವಿಫಲವಾಯಿತು. ಅವರ ವಯಸ್ಸಾದ ತಂದೆ ಖಿನ್ನತೆಗೆ ಜಾರಿದರು. ಇದನ್ನೇ ದುರಪಯೋಗ ಪಡಿಸಿಕೊಂಡ ಗೋಸೈನ್ ಎಂಬ ಯುವಕ ತಾನೇ ಕನ್ಹಯ್ಯಾ ಅಂತ ಹೇಳಿ ಮನೆ ಸೇರಿಕೊಂಡ. ಅಕ್ಕಪಕ್ಕದವರೂ ಇದನ್ನು ನಂಬಿದರು. ಆದರೂ ಜಮೀನ್ದಾರನಿಗೆ ಈತನ ಬಗ್ಗೆ ಸಂಶಯ ಇದ್ದೇ ಇತ್ತು. ಇಷ್ಟೇ ಅಲ್ಲ ಈ ವಂಚಕ ಅಲ್ಲಿಯ ಶಿಕ್ಷಕರು ಹಾಗೂ ಇನ್ನಿತರರನ್ನು ಗುರುತಿಸುವಲ್ಲಿ ವಿಫಲವಾಗಿದ್ದ. ಈತನ ನಡವಳಿಕೆ ಮೇಲೆ ಕುಟುಂಬದ ಸದಸ್ಯರಿಗೆ ಸಂಶಯ ಇದ್ದೇ ಇತ್ತು.

ಜಮೀನ್ದಾರಿಗೆ ವಯಸ್ಸಾಗಿದ್ದರಿಂದ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.ಹೇಗೂ ಒಬ್ಬ ಮನೆಗೆ ಬಂದಿದ್ದಾನಲ್ಲ ಅಂತ ಸಮಾಧಾನ ಪಟ್ಟುಕೊಂಡಿದ್ದ

ವಂಚಕ ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಸ್ತಿ ಉಡಾಯಿಸ ತೊಡಗಿದ್ದ. ಆದರೆ ಜಮೀನ್ದಾರನ ಪತ್ನಿ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದಾಗ ಈತನ ಬಣ್ಣ ಬಯಲಾಗ ತೊಡಗಿತ್ತು. ಇದೇ ಕಾರಣ ಈತ ಡಿಎನ್ಎ ಟೆಸ್ಟ್ ನಿರಾಕರಿಸುತ್ತಿದ್ದ. ತನ್ನ ಗೋಸೈನ್ ಹೆಸರಿನ ಎಲ್ಲ ದಾಖಲೆಗಳನ್ನು ನಾಶಮಾಡಿ , ನಾಪತ್ತೆಯಾಗಿದ್ದ ಕನ್ಹಯ್ಯನ ಹೆಸರಲ್ಲಿ ದಾಖಲೆ ಸೃಷ್ಟಿಸಿಕೊಂಡಿದ್ದ.

ಅನೇಕ ವರ್ಷಗಳ ಕಾಲ ಜಾಮೀನಿನ ಮೇಲೆ ಓಡಾಡುತ್ತ ಮಜಾ ಮಾಡಿಕೊಂಡಿದ್ದ. ನಾಲ್ಕು ದಶಕಗಳ ಕಾಲ ಹಲವು ಹಂತಗಳ ವಿಚಾರಣೆ ನಂತರ ಈತ ಒಬ್ಬ ದೊಡ್ಡ ವಂಚಕ ಎಂದು ಸಾಬೀತಾಗಿದ್ದರಿಂದ ಕೋರ್ಟ ನಕಲಿ ಪುತ್ರ ಗೋಸೈನ್ ಎಂಬಾತನಿಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

Edited By :
PublicNext

PublicNext

06/07/2022 12:01 pm

Cinque Terre

31.97 K

Cinque Terre

2