ಮಹಾರಾಷ್ಟ್ರ: ಅಮರಾವತಿಯಲ್ಲಿ ರಸಾಯನಶಾಸ್ತ್ರಜ್ಞನರ ಕತ್ತು ಸೀಳಿ ಕೊಲೆ ಮಾಡಲಾಗಿದೆ. NIA ಈಗ ತನಿಖೆ ಆರಂಭಿಸಿದ್ದು,ಈ ಪ್ರಕರಣದ ತನಿಕೆ ಮಾಡುವಂತೆ ಗೃಹ ಸಚಿವ ಅಮಿತ್ ಶಾ ಆದೇಶ ನೀಡಿದ್ದಾರೆ.
ರಾಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಹತ್ಯೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.NIA ಈ ದೃಶ್ಯಗಳನ್ನ ಇಟ್ಟುಕೊಂಡೇ ಈಗ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ, ಅಮರಾವತಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನವಹಿಸಿದೆ. ಈ ಪ್ರಕರಣವನ್ನ NIA ಗೆ ಒಪ್ಪಿಸಬೇಕು ಅಂತಲು ಬಿಜೆಪಿ ಒತ್ತಾಯಿಸಿದೆ.
ಇನ್ನು ಹತ್ಯೆಯಾದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ,ಪಶುವೈದ್ಯಕೀಯ ಜೌಷಧಿ ಅಂಗಡಿಯನ್ನ ಇಟ್ಟುಕೊಂಡಿದ್ದರು. ನೂಪುರ್ ಶರ್ಮಾ ಹೇಳಿಕೆಯನ್ನ ಬೆಂಬಲಿಸಿಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿಗದ್ದರು. ಅದಕ್ಕೆ ಉಮೇಶ್ ಕೊಲೆ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.
PublicNext
02/07/2022 05:43 pm