ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಜಗಳ ಆಡ್ಬೇಡಿ ಅಂದಿದ್ದಕ್ಕೆ ಲಾಂಗ್​​ ಬೀಸಿದ ಪುಂಡರು.!

ಮಂಡ್ಯ: ಮಂಡ್ಯದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ನಿಲ್ಲುವಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಮತ್ತೊಂದು ಡೆಡ್ಲಿ ಅಟ್ಯಾಕ್ ನಡೆದಿದ್ದು, ದುಷ್ಕರ್ಮಿಗಳ ಅಟ್ಟಹಾಸದ ಲೈವ್ ವಿಡಿಯೋ ಲಭ್ಯವಾಗಿದೆ.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ತೂಬಿನಕೆರೆ ಬಳಿ ಯುವಕರ ಗುಂಪೊಂದು ಜಗಳವಾಡ್ತಿತ್ತು. ಈ ವೇಳೆ ಶಂಕರೇಗೌಡ ಮಧ್ಯ ಪ್ರವೇಶಿಸಿ, ಜಗಳ ಆಡ್ಬೇಡ್ರಪ್ಪಾ ಎಂದಿದ್ದಾರೆ. ಇದರಿಂದ ಕೋಪಗೊಂಡ ಯುವಕರ ಗುಂಪು ಶಂಕರೇಗೌಡರನ್ನು ಹಿಂಬಾಲಿಸಿ ಅಟ್ಯಾಕ್​ ಮಾಡಿದೆ.

ಯುವಕರು ಶಂಕರೇಗೌಡರಿಗೆ ಚಾಕುವಿನಿಂದ ಚುಚ್ಚಿ, ಲಾಂಗ್‌ನಿಂದ ಕೊಚ್ಚಲು ಯತ್ನಸಿದ್ದಾರೆ. ಇನ್ನು ಸ್ಥಳೀಯರು ರಸ್ತೆ ಮಧ್ಯೆ ಅಟ್ಯಾಕ್ ನಡೆಯುತ್ತಿದ್ದರೂ ಸಹಾಯಕ್ಕೆ ಬಾರದೆ ನಿಂತಿದ್ದರು. ಶಂಕರೇಗೌಡ ಏಕಾಂಗಿಯಾಗಿ ಹೋರಾಡಿ ಪ್ರಾಣ ಉಳಿಸಿ ಕೊಂಡಿದ್ದಾರೆ. ಜನ ಜಮಾಯಿಸ್ತಿದ್ದಂತೆ ಆರೋಪಿಗಳು ಬೈಕ್ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ಕೇಸ್​ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ​ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Edited By : Manjunath H D
PublicNext

PublicNext

29/06/2022 05:12 pm

Cinque Terre

88.96 K

Cinque Terre

8

ಸಂಬಂಧಿತ ಸುದ್ದಿ